ಇಂದು 13/04/2026) 4 ಘಂಟೆಗೆ , ರಸ್ತೆ ದುರಸ್ತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ .

ಇಂದು ರಸ್ತೆ ದುರಸ್ತಿಗಾಗಿ ನಾವು ಪಕ್ಷಾತೀತವಾಗಿ ಹಮ್ಮಿಕೊಂಡಿರುವ ಈ ನ್ಯಾಯಯುತ ಹೋರಾಟವು ನಮ್ಮೂರಿನ ಅಭಿವೃದ್ಧಿಯ ಭಾಗವಾಗಿದೆ. ಇಂತಹ ನಿರ್ಣಾಯಕ ಸಮಯದಲ್ಲಿ ಊರಿನ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸದೆ, ಪ್ರತಿಭಟನೆಯಲ್ಲಿ ಭಾಗವಹಿಸದೆ ಅಥವಾ ಬೆಂಬಲ ಸೂಚಿಸದೆ ದೂರ ಉಳಿಯುವವರಿಗೆ ಒಂದು ಸ್ಪಷ್ಟ ಸಂದೇಶ: *​ಯಾರು ಇಂದು ನಮ್ಮ ಜನರ ಕಷ್ಟಕ್ಕೆ ಮತ್ತು ಈ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲವೋ, ಅಂತಹವರು ನಾಳೆ ಚುನಾವಣೆ ಸಮಯದಲ್ಲಿ ನಮ್ಮ ಮನೆ ಬಾಗಿಲಿಗೆ ಮತ ಕೇಳಲು ಬಂದಾಗ ಖಂಡಿತವಾಗಿಯೂ ನಾವು ತಕ್ಕ ಉತ್ತರ ನೀಡಲಿದ್ದೇವೆ.* ಅಭಿವೃದ್ಧಿಗೆ ಸ್ಪಂದಿಸದವರಿಗೆ ನಮ್ಮ ಮತದ ಹಕ್ಕಿನ …

Continue Reading

ರಸ್ತೆ ದುರಸ್ತಿಗಾಗಿ ಬೃಹತ್ ಪ್ರತಿಭಟನೆ! ✊ ನಮ್ಮ ಹಕ್ಕಿಗಾಗಿ, ನಮ್ಮೂರಿನ ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಭಾಗವಹಿಸೋಣ.

ನಮ್ಮೂರಿನ ಪ್ರಿಯ ನಾಗರಿಕರೇ ಮತ್ತು ಹೋರಾಟದ ಹಿತೈಷಿಗಳೇ,   📅 ದಿನಾಂಕ: ಏಪ್ರಿಲ್ 13, 2026 (ಸೋಮವಾರ)* *🕒 ಸಮಯ: ಮಧ್ಯಾಹ್ನ ಸರಿಯಾಗಿ 3:00 ಗಂಟೆಗೆ* 📍 ಸ್ಥಳ:* *ತಿಂಗಳಾಡಿ ಜಂಕ್ಷನ್ ಬಳಿ*   _✊🏻 *ನಮ್ಮ ಹಕ್ಕಿಗಾಗಿ, ಒಗ್ಗಟ್ಟಿನಿಂದ ಮುನ್ನಡೆಯೋಣ. ✊🏻*  

Continue Reading

ತಿಂಗಳಾಡಿ: ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಏ. 13ರಂದು ಬೃಹತ್ ಪ್ರತಿಭಟನೆ*

  ತಿಂಗಳಾಡಿ : ಕಳೆದ ದಶಕದಿಂದ ಸರಿಯಾದ ದುರಸ್ತಿ ಕಾಣದೆ ಅಧ್ವಾನವಾಗಿರುವ ತಿಂಗಳಾಡಿ-ಕೂಡುರಸ್ತೆ-ರೆಂಜಲಾಡಿ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ, ಏಪ್ರಿಲ್ 13ರಂದು ಮಧ್ಯಾಹ್ನ 3:00 ಗಂಟೆಗೆ ತಿಂಗಳಾಡಿ ಜಂಕ್ಷನ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನರಕಯಾತನೆ ನೀಡುತ್ತಿರುವ ರಸ್ತೆ: ತಿಂಗಳಾಡಿ ಸುತ್ತಮುತ್ತಲಿನ ಗ್ರಾಮಗಳನ್ನು ಸಂಪರ್ಕಿಸುವ ಈ ಪ್ರಮುಖ ರಸ್ತೆಯು ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಕೆರೆಯಂತಾಗುವ ರಸ್ತೆ, ಬೇಸಿಗೆಯಲ್ಲಿ ವಿಪರೀತ ಧೂಳಿನಿಂದ ಕೂಡಿರುತ್ತದೆ. ಇದರಿಂದಾಗಿ ಶಾಲಾ ಮಕ್ಕಳು ಮತ್ತು ಹಿರಿಯ ನಾಗರಿಕರಲ್ಲಿ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು …

Continue Reading

ಶಾಂತಿ, ಸಮಾನತೆಯ ಸಂದೇಶ ಸಾರುವ ಮೂಲಕ ಈದುಲ್ ಫಿತ್ರ್ ಸಂಭ್ರಮ.

ಪುತ್ತೂರು. ನೇರೋಳ್ತಡ್ಕ ಮಸ್ಜಿದ್ ನಲ್ಲಿ ಶವ್ವಾಲ್‌ ತಿಂಗಳ ಮೊದಲ ದಿನ ಈದುಲ್ ಫಿತ್ರ್ ಹಬ್ಬದ ಸಂಭ್ರಮ . ಈದ್‌ ನಮಾಜ್. ಈದ್ ನಮಾಜ್ ಹಬ್ಬದ ಪ್ರಮುಖ ಆಕರ್ಷಣೆ. ಬಡವ, ಶ್ರೀಮಂತ ಎಂಬ ಭೇದವಿಲ್ಲದೆ, ಮೇಲು-ಕೀಳೆಂಬ ತಾರತಮ್ಯವಿಲ್ಲದೆ ಎಲ್ಲರೂ ಸಾಲಾಗಿ ನಿಂತು ಪ್ರಾರ್ಥಿಸುವ ಸನ್ನಿವೇಶ ದೇವನ ಮುಂದೆ ಎಲ್ಲರೂ ಸಮಾನರೆಂಬ ಸಂದೇಶವನ್ನು ಸಾರುತ್ತದೆ. ದೈನಂದಿನ ಸಾಮೂಹಿಕ ನಮಾಜ್‌ನ ಆಶಯ ಕೂಡ ಇದೇ ಆಗಿದೆ. ಈದ್‌ ನಮಾಜ್‌ ಬಳಿಕ ‘ಖುತ್ಬಾ’ ಪ್ರವಚನ ನಡೆಯಿತು . ಪ್ರಾರ್ಥನೆಯ ಬಳಿಕ ಎಲ್ಲರೂ ಪರಸ್ಪರ ಹಸ್ತಲಾಘವ ಮಾಡಿಕೊಂಡು, ಆಲಿಂಗಿಸಿ ಈದ್‌ ಶುಭಾಶಯದಲ್ಲಿ …

Continue Reading

ಭಾರೀ ಕುಸಿತ ಕಂಡ ಚಿನ್ನ-ಬೆಳ್ಳಿ; ಇಂದಿನ ದರವೆಷ್ಟು?

ಅಮೆರಿಕದ ಫೆಡರಲ್ ರಿಸರ್ವ್ ಕೈಗೊಂಡ ನಿರ್ಧಾರದಿಂದಾಗಿ ಚಿನ್ನ-ಬೆಳ್ಳಿ ದರ ಏರಿಳಿತ ಕಾಣುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಿಪರೀತ ಏರಿಲ್ಲ. ಬದಲಾಗಿ ಕುಸಿಯುತ್ತಿದೆ. ಮಾರ್ಚ್ 09 ಸೋಮವಾರದಂದು ಕುಸಿದ ಶುದ್ಧ ಚಿನ್ನದ ಬೆಲೆ 16 ಸಾವಿರದ ಮಿತಿಯೊಳಗೆ ನಿಂತಿತ್ತು. ಕಳೆದ ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟಿಗೆ ಸತತ ಏರಿಕೆಯಾಗಿದ್ದು, ಮತ್ತೆ 16 ಸಾವಿರದ ಮಿತಿ ಮೀರಿ …

Continue Reading

💥ದ.ಕ. ಜಿಲ್ಲೆ: ಎಸೆಸೆಲ್ಸಿ ಭಾಷಾ ಪರೀಕ್ಷೆಗೆ 28,334 ವಿದ್ಯಾರ್ಥಿಗಳು ಹಾಜರು, 213 ಗೈರು .

ಮಂಗಳೂರು, ಮಾ.18: ದ.ಕ. ಜಿಲ್ಲೆಯಲ್ಲಿ ಈ ವರ್ಷದ ಎಸೆಸೆಲ್ಸಿ ಪರೀಕ್ಷೆ ಬುಧವಾರ ಪ್ರಾರಂಭಗೊಂಡಿದೆ. 91 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪ್ರಥಮ ಭಾಷಾ ಪರೀಕ್ಷೆಗೆ 28,334 ವಿದ್ಯಾರ್ಥಿ ಹಾಜರಾಗಿದ್ದಾರೆ, ಒಟ್ಟು ನೋಂದಾಯಿತ 28,547 ವಿದ್ಯಾರ್ಥಿಗಳ ಪೈಕಿ 213 ಮಂದಿ ಗೈರು ಹಾಜರಾಗಿದ್ದಾರೆ. ಯಾವುದೇ ಕೇಂದ್ರದಲ್ಲೂ ನಕಲು ಮಾಡಲು ಯತ್ನಿಸಿ ಡಿಬಾರ್ ಆಗಿರುವ ಪ್ರಕರಣ ವರದಿಯಾಗಿಲ್ಲ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 27,633 ರೆಗ್ಯುಲರ್, ಖಾಸಗಿ 979, ರೆಗ್ಯುಲರ್ ರಿಪೀಟರ್ 632 ಹಾಗೂ ಖಾಸಗಿಯಾಗಿ 153 ಮಂದಿ ನೋಂದಾಯಿಸಿಕೊಂಡಿದ್ದರು.  

Continue Reading

ಶುಕ್ರವಾರ (ಮಾ.20) ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ: ಡಿಸಿ ಎಚ್.ವಿ ದರ್ಶನ್

ಮಂಗಳೂರು: ಚಂದ್ರ ದರ್ಶನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದುಲ್ ಫಿತ್ರ್‌ ಶುಕ್ರವಾರ ನಡೆಯಲಿರುವುದರಿಂದ ದ.ಕ. ಜಿಲ್ಲೆಯಾದ್ಯಂತ ಮಾರ್ಚ್ 20ರಂದು ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಚ್.ವಿ ದರ್ಶನ್ ಆದೇಶಿಸಿದ್ದಾರೆ. Read More: ನಿಮ್ಮ ಕನಸಿನ ಮನೆ ಈಗ ನನಸಾಗಲಿದೆ – ಐಎಫ್ಎ ಬಿಲ್ಡರ್‌ಗಳೊಂದಿಗೆ!” 60+40 ಸ್ಕೀಂ 0 % ಬಡ್ಡಿ 50 ತಿಂಗಳ ಕಂತು . ಇಂದೇ ಸಂಪರ್ಕಿಸಿ .

Continue Reading

ನಾಳೆ ಮಾ.20 ಕ್ಕೆ ಈದುಲ್ ಫಿತ್ರ್ ಹಬ್ಬ.

    ಪುತ್ತೂರು: ಪವಿತ್ರ ರಮಝಾನ್ ತಿಂಗಳ ಉಪವಾಸ ಸಮಾಪ್ತಿಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈದುಲ್ ಫಿತ್ ಹಬ್ಬವನ್ನು ನಾಳೆ (ಮಾ.20, ಶುಕ್ರವಾರ) ಆಚರಿಸಲಾಗುವುದು ಎಂದು ಜಿಲ್ಲಾ ಖಾಝಿ ಪ್ರಕಟಣೆ ನೀಡಿದ್ದಾರೆ. ಇಂದು (ಮಾ.19) ಗುರುವಾರ ಸೂರ್ಯಾಸ್ತದ ನಂತರ ಶವ್ಹಾಲ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝರಿ ಅವರು ಘೋಷಣೆ ಮಾಡಿದ್ದಾರೆ.

Continue Reading

ಪುತ್ತೂರು: ಹೆರಿಗೆ ಸಮಯ ಮಗು ಮೃತ್ಯು ಸಂಶಯ ಹಿನ್ನೆಲೆ – ಪ್ರಕರಣ ದಾಖಲು

ಪುತ್ತೂರು: ಹೆರಿಗೆ ಸಮಯ ಮಗು ಮೃತಪಟ್ಟ ಕುರಿತು ಸಂಶಯದ ಹಿನ್ನೆಲೆಯಲ್ಲಿ ದೂರುದಾರರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬೆಳ್ಳಾರೆ ಗ್ರಾಮದ ಮಿಲನ್ ಎಂಬವರ ಪತ್ನಿ ಚೈತ್ರ ಅವರು ಮೊದಲನೆ ಮಗುವಿನ ಗರ್ಭಿಣಿಯಾಗಿದ್ದು, ಪುತ್ತೂರು ಸಿಟಿ ಆಸ್ಪತ್ರೆಯ ಹೆರಿಗೆ ತಜ್ಞೆ ಡಾ. ಕೃತಿ ಎಂಬವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಜ.15ರಂದು ಹೆರಿಗೆ ದಿನಾಂಕ ನಿಗದಿಪಡಿಸಿದ್ದರು. ಆದರೆ ಜ.13ಕ್ಕೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದು, ಅದರಂತೆ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾಗಿದ್ದ …

Continue Reading

ಇಂದಿನಿಂದ 3 ದಿನಗಳ ಇತಿಹಾಸ ಪ್ರಸಿದ್ದವಾದ ಎಣ್ಮೂರು ಮಖಾಂ ಉರೂಸ್ ಪ್ರಾರಂಭ.

ಕಡಬ. ಪ್ರಸಿದ್ದ ಕ್ಷೇತ್ರವಾದ ಎಣ್ಮೂರು ಮಖಾಂ ಉರೂಸ್ ಕಾರ್ಯಕ್ರಮವು  ಇಂದು ರಾತ್ರಿಯಿಂದ ಪ್ರಾರಂಭಗೊಳ್ಳಲಿದೆ.  ಹಲವಾರು ಉಮರಾ ಉಲಮಾ ನಾಯಕರು ಈ 3 ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.    

Continue Reading