ಇಂದು 13/04/2026) 4 ಘಂಟೆಗೆ , ರಸ್ತೆ ದುರಸ್ತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ .

ಇಂದು ರಸ್ತೆ ದುರಸ್ತಿಗಾಗಿ ನಾವು ಪಕ್ಷಾತೀತವಾಗಿ ಹಮ್ಮಿಕೊಂಡಿರುವ ಈ ನ್ಯಾಯಯುತ ಹೋರಾಟವು ನಮ್ಮೂರಿನ ಅಭಿವೃದ್ಧಿಯ ಭಾಗವಾಗಿದೆ. ಇಂತಹ ನಿರ್ಣಾಯಕ ಸಮಯದಲ್ಲಿ ಊರಿನ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸದೆ, ಪ್ರತಿಭಟನೆಯಲ್ಲಿ ಭಾಗವಹಿಸದೆ ಅಥವಾ ಬೆಂಬಲ ಸೂಚಿಸದೆ ದೂರ ಉಳಿಯುವವರಿಗೆ ಒಂದು ಸ್ಪಷ್ಟ ಸಂದೇಶ:

*​ಯಾರು ಇಂದು ನಮ್ಮ ಜನರ ಕಷ್ಟಕ್ಕೆ ಮತ್ತು ಈ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲವೋ, ಅಂತಹವರು ನಾಳೆ ಚುನಾವಣೆ ಸಮಯದಲ್ಲಿ ನಮ್ಮ ಮನೆ ಬಾಗಿಲಿಗೆ ಮತ ಕೇಳಲು ಬಂದಾಗ ಖಂಡಿತವಾಗಿಯೂ ನಾವು ತಕ್ಕ ಉತ್ತರ ನೀಡಲಿದ್ದೇವೆ.*

ಅಭಿವೃದ್ಧಿಗೆ ಸ್ಪಂದಿಸದವರಿಗೆ ನಮ್ಮ ಮತದ ಹಕ್ಕಿನ ಮೂಲಕ ಪಾಠ ಕಲಿಸುವುದು ಅನಿವಾರ್ಯವಾಗಲಿದೆ.

               ಜಾಗೃತ ನಾಗರಿಕರ ವೇದಿಕೆ, ತಿಂಗಳಾಡಿ – ಕೂಡುರಸ್ತೆ-ರೆಂಜಲಾಡಿ

​ನಮ್ಮೂರಿನ ರಸ್ತೆಗಾಗಿ ಈಗ ಒಂದಾಗೋಣ, ಇಲ್ಲವಾದರೆ ನಾಳೆ ಉತ್ತರಿಸಲು ಸಿದ್ಧರಾಗಿರಿ!

Share this article!

Leave A Comment