ತಿಂಗಳಾಡಿ: ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಏ. 13ರಂದು ಬೃಹತ್ ಪ್ರತಿಭಟನೆ*

 
ತಿಂಗಳಾಡಿ
: ಕಳೆದ ದಶಕದಿಂದ ಸರಿಯಾದ ದುರಸ್ತಿ ಕಾಣದೆ ಅಧ್ವಾನವಾಗಿರುವ ತಿಂಗಳಾಡಿ-ಕೂಡುರಸ್ತೆ-ರೆಂಜಲಾಡಿ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ, ಏಪ್ರಿಲ್ 13ರಂದು ಮಧ್ಯಾಹ್ನ 3:00 ಗಂಟೆಗೆ ತಿಂಗಳಾಡಿ ಜಂಕ್ಷನ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ನರಕಯಾತನೆ ನೀಡುತ್ತಿರುವ ರಸ್ತೆ:
ತಿಂಗಳಾಡಿ ಸುತ್ತಮುತ್ತಲಿನ ಗ್ರಾಮಗಳನ್ನು ಸಂಪರ್ಕಿಸುವ ಈ ಪ್ರಮುಖ ರಸ್ತೆಯು ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಕೆರೆಯಂತಾಗುವ ರಸ್ತೆ, ಬೇಸಿಗೆಯಲ್ಲಿ ವಿಪರೀತ ಧೂಳಿನಿಂದ ಕೂಡಿರುತ್ತದೆ. ಇದರಿಂದಾಗಿ ಶಾಲಾ ಮಕ್ಕಳು ಮತ್ತು ಹಿರಿಯ ನಾಗರಿಕರಲ್ಲಿ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯ ದುಸ್ಥಿತಿಯಿಂದಾಗಿ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಹಾಗೂ ಇತರೆ ವಾಹನಗಳು ಗ್ರಾಮದ ಒಳಭಾಗಕ್ಕೆ ಬರಲು ಹರಸಾಹಸ ಪಡಬೇಕಾಗಿದೆ. ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಇದೀಗ ಸಾರ್ವಜನಿಕರೇ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ.

ದಿನಾಂಕ: ಏಪ್ರಿಲ್ 13, 2026  .ಸೋಮವಾರ
ಸಮಯ: ಮಧ್ಯಾಹ್ನ 3:00 ಗಂಟೆಗೆ.
ಸ್ಥಳ: ತಿಂಗಳಾಡಿ ಜಂಕ್ಷನ್, ಬಳಿ

 

ಜಾಗೃತ ನಾಗರಿಕರ ವೇದಿಕೆ ಕರೆ:
“ನಮ್ಮ ಹಕ್ಕಿಗಾಗಿ ನಾವು ಹೋರಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಪ್ರತಿಭಟನೆಯು ಕೇವಲ ಸರ್ಕಾರದ ಗಮನ ಸೆಳೆಯುವುದಷ್ಟೇ ಅಲ್ಲದೆ, ಶಾಶ್ವತ ಪರಿಹಾರ ಸಿಗುವವರೆಗೂ ಮುಂದುವರಿಯಲಿದೆ” ಎಂದು ತಿಂಗಳಾಡಿ – ಕೂಡುರಸ್ತೆ – ರೆಂಜಲಾಡಿ ಜಾಗೃತ ನಾಗರಿಕರ ವೇದಿಕೆ ತಿಳಿಸಿದೆ.

ಏಪ್ರಿಲ್ 13ರ ಸೋಮವಾರ ಮಧ್ಯಾಹ್ನ ನಡೆಯಲಿರುವ ಈ ಬೃಹತ್ ಆಂದೋಲನದಲ್ಲಿ ಮೂರೂ ಗ್ರಾಮಗಳ ಸಾವಿರಾರು ನಾಗರಿಕರು ಭಾಗವಹಿಸುವ ನಿರೀಕ್ಷೆಯಿದೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಸ್ತೆ ಕಾಮಗಾರಿಯ ಬಗ್ಗೆ ಸ್ಪಷ್ಟ ಭರವಸೆ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.

 

ಈ ಭಾಗದ ಜನರ ಬೇಡಿಕೆ ಮಾರ್ಗ ದುರಸ್ಥಿ:
ತಿಂಗಳಾಡಿ ರಸ್ತೆ ಕಾಮಗಾರಿಯ ವಿಷಯವನ್ನು  ಈ ಭಾಗದ ಹಲವಾರು ಯುವಕರು ,   ನ್ಯೂಸ್ ಪತ್ರಿಕೆ , ವಾಟ್ಸ್ಅಪ್ ಇನ್ನಿತರ ವೆಬ್ಸೈಟ್ ಮೂಲಕ ರಸ್ತೆಯನ್ನು ದುರಸ್ಥಿ ಪಡಿಸುವ ಬಗ್ಗೆ  , ಪುತ್ತೂರಿನ ಕಾಂಗ್ರೇಸ್ ಶಾಸಕರ ಗಮನಕ್ಕೆ ತಂದರೂ , ಯಾವುದೇ ಒಂದು ಸರಿಪಡಿಸುವ ವ್ಯವಸ್ಥೆಯನ್ನು ಮಾಡುತ್ತಿಲ್ಲ ,


ಪುತ್ತೂರಿಗೆ  ಅಶೋಕ್ ರೈ ಶಾಸಕರಾಗಬೇಕು  ಎಂದು ನಾವೆಲ್ಲರೂ ಮತ ಚಲಾಯಿಸಿದೆವು .

 

ನಮ್ಮ ಯಾವುದಾದರೂ ಕೆಲಸವಾಗಬೇಕಾದರೆ , ನಾವು ಕಾಂಗ್ರೇಸ್ ಬೂತ್ , ವಲಯದವರ ಹಿಂದೆ ಹೋಗಿ ಸಾಯಿಬೇಕು .  ನಾವು ಮತವನ್ನು ಹಾಕಿದ್ದು  ಅಶೋಕ್ ರೈ ಗೆ  . 

ಅನ್ಯಾಯವಾಗುವಾಗ ಮಾತನಾಡುವ , ನ್ಯಾಯದ ಪರ ಮಾತ್ರ ನಿಲ್ಲುವವರ ಜೊತೆ  ನಮ್ಮ 18 ನ್ಯೂಸ್ ಮಾಧ್ಯಮ .

ಪಕ್ಷವನ್ನು ನೋಡದೆ ಅಶೋಕ್ ರೈ ಗೆ ಮತ ನೀಡಿದೆವು ನಾವು .

ನಮ್ಮ ಮುಂದಿನ ಬಾರಿಯ ಮತಕ್ಕೆ ನಾವು ಬೇರೆ ದಾರಿ ಹುಡುಕಿ ಬೇರೆೆ ತರಹ ವಲಯ ಬೂತ್ ಗೆ ಸೇರ್ಪಡೆ ಮಾಡುವ ಮುಂಚಿತವಾಗಿ ಈ ಊರಿನ ಗ್ರಾಮಸ್ಥರ ಬೇಡಿಕೆಯನ್ನು , ಸರಿಪಡಿಸಿಕೊಡಬೇಕೆಂದು ಮತ್ತೊಮ್ಮೆ ಈ ಭಾಗದ ಶಾಸಕರಿಗೆ ಮಾಧ್ಯಮದ ಮೂಲಕ ಮನವಿ ನೀಡುತ್ತಿದ್ದೇವೆ. 

                                                       ತಾಜುದ್ದೀನ್ ಪುತ್ತೂರು . 

 

 

 

 

Share this article!

Leave A Comment