ಶಾಂತಿ, ಸಮಾನತೆಯ ಸಂದೇಶ ಸಾರುವ ಮೂಲಕ ಈದುಲ್ ಫಿತ್ರ್ ಸಂಭ್ರಮ.

ಪುತ್ತೂರು.

ನೇರೋಳ್ತಡ್ಕ ಮಸ್ಜಿದ್ ನಲ್ಲಿ ಶವ್ವಾಲ್‌ ತಿಂಗಳ ಮೊದಲ ದಿನ ಈದುಲ್ ಫಿತ್ರ್ ಹಬ್ಬದ ಸಂಭ್ರಮ . ಈದ್‌ ನಮಾಜ್.

ಈದ್ ನಮಾಜ್ ಹಬ್ಬದ ಪ್ರಮುಖ ಆಕರ್ಷಣೆ. ಬಡವ, ಶ್ರೀಮಂತ ಎಂಬ ಭೇದವಿಲ್ಲದೆ, ಮೇಲು-ಕೀಳೆಂಬ ತಾರತಮ್ಯವಿಲ್ಲದೆ ಎಲ್ಲರೂ ಸಾಲಾಗಿ ನಿಂತು ಪ್ರಾರ್ಥಿಸುವ ಸನ್ನಿವೇಶ ದೇವನ ಮುಂದೆ ಎಲ್ಲರೂ ಸಮಾನರೆಂಬ ಸಂದೇಶವನ್ನು ಸಾರುತ್ತದೆ. ದೈನಂದಿನ ಸಾಮೂಹಿಕ ನಮಾಜ್‌ನ ಆಶಯ ಕೂಡ ಇದೇ ಆಗಿದೆ. ಈದ್‌ ನಮಾಜ್‌ ಬಳಿಕ ‘ಖುತ್ಬಾ’ ಪ್ರವಚನ ನಡೆಯಿತು .

ಪ್ರಾರ್ಥನೆಯ ಬಳಿಕ ಎಲ್ಲರೂ ಪರಸ್ಪರ ಹಸ್ತಲಾಘವ ಮಾಡಿಕೊಂಡು, ಆಲಿಂಗಿಸಿ ಈದ್‌ ಶುಭಾಶಯದಲ್ಲಿ ಸೇರಿಕೊಂಡರು .

 

ಇಸ್ಲಾಮಿನ ಹಬ್ಬಗಳಲ್ಲಿ ಕಂಡು ಬರುವ ಪ್ರಮುಖ ಅಂಶಗಳೆಂದರೆ ಪ್ರೀತಿ, ಸೌಹಾರ್ದ, ಸಂಬಂಧಗಳ ಸುಧಾರಣೆ ಮತ್ತು ಅಲ್ಲಾಹನೊಂದಿಗೆ  ಪ್ರಕಟಿಸಬೇಕಾದ ಕೃತಜ್ಞತೆಯ ಮನೋಭಾವ. ಸಮಾಜದಲ್ಲಿ ಪ್ರೀತಿ, ಸಮಾನತೆಯ ಸಂದೇಶ ಹರಡುವುದಕ್ಕೆ ಹಬ್ಬಗಳಲ್ಲಿ ಒತ್ತು ಕೊಡಲಾಗಿದೆ. ಮನುಷ್ಯನು ಕೇವಲ ತನ್ನ ವೈಯಕ್ತಿಕ ಏಳಿಗೆಯಲ್ಲಿ ಸಂತಸಪಡದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತವನ್ನೂ ಬಯಸಬೇಕು ಎಂಬ ಸಂದೇಶವನ್ನೂ , ಕೋರಿದರು.

 

 

 

 

Share this article!

Leave A Comment