ಶಾಂತಿ, ಸಮಾನತೆಯ ಸಂದೇಶ ಸಾರುವ ಮೂಲಕ ಈದುಲ್ ಫಿತ್ರ್ ಸಂಭ್ರಮ.
-
admin_18np
-
March 20, 2026
-
Blog
-
0 Comments
ಪುತ್ತೂರು. ನೇರೋಳ್ತಡ್ಕ ಮಸ್ಜಿದ್ ನಲ್ಲಿ ಶವ್ವಾಲ್ ತಿಂಗಳ ಮೊದಲ ದಿನ ಈದುಲ್ ಫಿತ್ರ್ ಹಬ್ಬದ ಸಂಭ್ರಮ . ಈದ್ ನಮಾಜ್. ಈದ್ ನಮಾಜ್ ಹಬ್ಬದ ಪ್ರಮುಖ ಆಕರ್ಷಣೆ. ಬಡವ, ಶ್ರೀಮಂತ ಎಂಬ ಭೇದವಿಲ್ಲದೆ, ಮೇಲು-ಕೀಳೆಂಬ ತಾರತಮ್ಯವಿಲ್ಲದೆ ಎಲ್ಲರೂ ಸಾಲಾಗಿ ನಿಂತು ಪ್ರಾರ್ಥಿಸುವ ಸನ್ನಿವೇಶ ದೇವನ ಮುಂದೆ ಎಲ್ಲರೂ ಸಮಾನರೆಂಬ ಸಂದೇಶವನ್ನು ಸಾರುತ್ತದೆ. ದೈನಂದಿನ ಸಾಮೂಹಿಕ ನಮಾಜ್‌ನ ಆಶಯ ಕೂಡ ಇದೇ ಆಗಿದೆ. ಈದ್ ನಮಾಜ್ ಬಳಿಕ ‘ಖುತ್ಬಾ’ ಪ್ರವಚನ ನಡೆಯಿತು . ಪ್ರಾರ್ಥನೆಯ ಬಳಿಕ ಎಲ್ಲರೂ ಪರಸ್ಪರ ಹಸ್ತಲಾಘವ ಮಾಡಿಕೊಂಡು, ಆಲಿಂಗಿಸಿ ಈದ್ ಶುಭಾಶಯದಲ್ಲಿ …
Continue Reading
ಭಾರೀ ಕುಸಿತ ಕಂಡ ಚಿನ್ನ-ಬೆಳ್ಳಿ; ಇಂದಿನ ದರವೆಷ್ಟು?
-
admin_18np
-
March 19, 2026
-
Blog
-
0 Comments
ಅಮೆರಿಕದ ಫೆಡರಲ್ ರಿಸರ್ವ್ ಕೈಗೊಂಡ ನಿರ್ಧಾರದಿಂದಾಗಿ ಚಿನ್ನ-ಬೆಳ್ಳಿ ದರ ಏರಿಳಿತ ಕಾಣುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಿಪರೀತ ಏರಿಲ್ಲ. ಬದಲಾಗಿ ಕುಸಿಯುತ್ತಿದೆ. ಮಾರ್ಚ್ 09 ಸೋಮವಾರದಂದು ಕುಸಿದ ಶುದ್ಧ ಚಿನ್ನದ ಬೆಲೆ 16 ಸಾವಿರದ ಮಿತಿಯೊಳಗೆ ನಿಂತಿತ್ತು. ಕಳೆದ ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟಿಗೆ ಸತತ ಏರಿಕೆಯಾಗಿದ್ದು, ಮತ್ತೆ 16 ಸಾವಿರದ ಮಿತಿ ಮೀರಿ …
Continue Reading
💥ದ.ಕ. ಜಿಲ್ಲೆ: ಎಸೆಸೆಲ್ಸಿ ಭಾಷಾ ಪರೀಕ್ಷೆಗೆ 28,334 ವಿದ್ಯಾರ್ಥಿಗಳು ಹಾಜರು, 213 ಗೈರು .
-
admin_18np
-
March 19, 2026
-
Blog
-
0 Comments
ಮಂಗಳೂರು, ಮಾ.18: ದ.ಕ. ಜಿಲ್ಲೆಯಲ್ಲಿ ಈ ವರ್ಷದ ಎಸೆಸೆಲ್ಸಿ ಪರೀಕ್ಷೆ ಬುಧವಾರ ಪ್ರಾರಂಭಗೊಂಡಿದೆ. 91 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪ್ರಥಮ ಭಾಷಾ ಪರೀಕ್ಷೆಗೆ 28,334 ವಿದ್ಯಾರ್ಥಿ ಹಾಜರಾಗಿದ್ದಾರೆ, ಒಟ್ಟು ನೋಂದಾಯಿತ 28,547 ವಿದ್ಯಾರ್ಥಿಗಳ ಪೈಕಿ 213 ಮಂದಿ ಗೈರು ಹಾಜರಾಗಿದ್ದಾರೆ. ಯಾವುದೇ ಕೇಂದ್ರದಲ್ಲೂ ನಕಲು ಮಾಡಲು ಯತ್ನಿಸಿ ಡಿಬಾರ್ ಆಗಿರುವ ಪ್ರಕರಣ ವರದಿಯಾಗಿಲ್ಲ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 27,633 ರೆಗ್ಯುಲರ್, ಖಾಸಗಿ 979, ರೆಗ್ಯುಲರ್ ರಿಪೀಟರ್ 632 ಹಾಗೂ ಖಾಸಗಿಯಾಗಿ 153 ಮಂದಿ ನೋಂದಾಯಿಸಿಕೊಂಡಿದ್ದರು.
Continue Reading
ಶುಕ್ರವಾರ (ಮಾ.20) ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ: ಡಿಸಿ ಎಚ್.ವಿ ದರ್ಶನ್
-
admin_18np
-
March 19, 2026
-
Blog
-
0 Comments
ಮಂಗಳೂರು: ಚಂದ್ರ ದರ್ಶನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದುಲ್ ಫಿತ್ರ್ ಶುಕ್ರವಾರ ನಡೆಯಲಿರುವುದರಿಂದ ದ.ಕ. ಜಿಲ್ಲೆಯಾದ್ಯಂತ ಮಾರ್ಚ್ 20ರಂದು ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಚ್.ವಿ ದರ್ಶನ್ ಆದೇಶಿಸಿದ್ದಾರೆ. Read More: ನಿಮ್ಮ ಕನಸಿನ ಮನೆ ಈಗ ನನಸಾಗಲಿದೆ – ಐಎಫ್ಎ ಬಿಲ್ಡರ್‌ಗಳೊಂದಿಗೆ!” 60+40 ಸ್ಕೀಂ 0 % ಬಡ್ಡಿ 50 ತಿಂಗಳ ಕಂತು . ಇಂದೇ ಸಂಪರ್ಕಿಸಿ .
Continue Reading
ನಾಳೆ ಮಾ.20 ಕ್ಕೆ ಈದುಲ್ ಫಿತ್ರ್ ಹಬ್ಬ.
-
admin_18np
-
March 19, 2026
-
Blog
-
0 Comments
ಪುತ್ತೂರು: ಪವಿತ್ರ ರಮಝಾನ್ ತಿಂಗಳ ಉಪವಾಸ ಸಮಾಪ್ತಿಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈದುಲ್ ಫಿತ್ ಹಬ್ಬವನ್ನು ನಾಳೆ (ಮಾ.20, ಶುಕ್ರವಾರ) ಆಚರಿಸಲಾಗುವುದು ಎಂದು ಜಿಲ್ಲಾ ಖಾಝಿ ಪ್ರಕಟಣೆ ನೀಡಿದ್ದಾರೆ. ಇಂದು (ಮಾ.19) ಗುರುವಾರ ಸೂರ್ಯಾಸ್ತದ ನಂತರ ಶವ್ಹಾಲ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝರಿ ಅವರು ಘೋಷಣೆ ಮಾಡಿದ್ದಾರೆ.
Continue Reading