ಅಕ್ರಮ ಬೆಟ್ಟಿಂಗ್ ಪ್ರಕರಣ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ 14 ದಿನ ನ್ಯಾಯಾಂಗ ಬಂಧನ.

ಅಕ್ರಮ ಬೆಟ್ಟಿಂಗ್ ಪ್ರಕರಣ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ 14 ದಿನ ನ್ಯಾಯಾಂಗ ಬಂಧನ ಅಕ್ರಮವಾಗಿ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ ಪಪ್ಪಿಗೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಬೆಂಗಳೂರು: ಅಕ್ರಮವಾಗಿ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಕಾಂಗ್ರೆಸ್ (Congress) ಶಾಸಕ ಕೆಸಿ ವೀರೇಂದ್ರ ಪಪ್ಪಿಗೆ (Veerendra Pappi) ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ …

Continue Reading

ಇಂದು : ಪ್ರವಾದಿ ಮುಹಮ್ಮದ್ ಮುಸ್ತಾಫ (ಸ.ಅ) 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬದ್ರೀಯ್ಯಾ ಜುಮಾ ಮಸ್ಜಿದ್ ನೇರೋಳ್ತಡ್ಕ ಮೀಲಾದ್ ಕಮೀಟಿ ನೂರೇಮದೀನಾ ಕಾರ್ಯಕ್ರಮ

  ಪುತ್ತೂರು:  ಪ್ರವಾದಿ ಮುಹಮ್ಮದ್ ಮುಸ್ತಾಫ (ಸ.ಅ) 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬದ್ರೀಯ್ಯಾ ಜುಮಾ ಮಸ್ಜಿದ್ ನೇರೋಳ್ತಡ್ಕ ಮೀಲಾದ್ ಕಮೀಟಿ ನೂರೇಮದೀನಾ ಕಾರ್ಯಕ್ರಮವು ಇಂದು ನಡೆಯಲಿದೆ. ಮದ್ರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ  ಮಗ್ರಿಬ್ ನಮಾಜಿನ ಬಳಿಕ ಮೌಲೀದ್ ಕಾರ್ಯಕ್ರಮವು , ದುವಾ ನಡೆಯಲಿದೆ.

Continue Reading

ಇಂದು …… ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ. ನೂತನ ಕಚೇರಿ ಕೊಡಿಪ್ಪಾಡಿ ಬ್ರಾಂಚ್ ಉದ್ಘಾಟನೆ ಕಾರ್ಯಕ್ರಮ. SDPI ‌ಯ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.

ಎಸ್‌ಡಿಪಿಐ ಕೊಡಿಪ್ಪಾಡಿ ಬ್ರಾಂಚ್. ಸಮಿತಿ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿರುವ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಉಪಾಧ್ಯಕ್ಷರಾದ ಮೂನಿಸ್ ಅಲಿ, ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಅಧ್ಯಕ್ಷರು ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಶ್ರಫ್ ಬಾವು ರವರಿಗೆ ಹಾರ್ದಿಕ ಸ್ವಾಗತ. *ಫಾರೂಕ್ ಅರ್ಕ* *ಅಧ್ಯಕ್ಷರು SDPI ಕೊಡಿಪ್ಪಾಡಿ ಬ್ರಾಂಚ್*

Continue Reading

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಗೆಹರಿಯದ ಕೆಂಪು ಕಲ್ಲು ಗಣಿಗಾರಿಕೆ ಸಮಸ್ಯೆ, ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯಖಂಡಿಸಿ ಸೆ.16ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ: ಚೌಟ ಸಂಸದ.

ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಸಂಬಂಧ ರಾಯಲ್ಟಿ ಹೆಚ್ಚಳ ಮಾಡಿ ಕಠಿಣ ನಿಯಮ ರೂಪಿಸಿರುವುದರಿಂದ ಎದುರಾಗಿರುವ ಗಂಭೀರ ಸಮಸ್ಯೆಗೆ ಇನ್ನು ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಸೂಕ್ತ ಪರಿಹಾರ ದೊರೆಯದಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಸೆ. 16ರಂದು ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಮಂಗಳೂರು ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿರುವ ಧರಣಿಯಲ್ಲಿ …

Continue Reading

Vitla : ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ದೆಹಲಿ ಸ್ವಾತಂತ್ರೋತ್ಸವಕ್ಕೆ ವಿಶೇಷ ಅತಿಥಿಯಾಗಿದ್ದ ಸ್ವಚ್ಚ ವಾಹಿನಿ ಸಾರಥಿ ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ನಫೀಸಾ ! ಬಿಲ್ ಕಲೆಕ್ಟರ್ ಕೂಡಾ ಅರೆಸ್ಟ್!

ಮಂಗಳೂರು: (ಸೆಪ್ಟೆಂಬರ್ 06): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ನಲ್ಲಿ ಭ್ರಷ್ಟಾಚಾರದ ಕರಾಳ ಮುಖ ಬಯಲಾಗಿದೆ. ಕೊಳವೆ ಬಾವಿ ಮಂಜೂರಾತಿಗಾಗಿ ಬರೋಬ್ಬರಿ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಸ್ವೀಕರಿಸುವಾಗಲೇ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅವರ ಸೂಚನೆ ಮೇರೆಗೆ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ವಿಲಿಯಂ ಕೂಡಾ ಲೋಕಾಯುಕ್ತ ಪೊಲೀಸರ ವಶದಲ್ಲಿದ್ದಾರೆ. ಪೆರುವಾಯಿ ಗ್ರಾಮದ 75 ವರ್ಷ ವಯಸ್ಸಿನ ವೃದ್ಧರೊಬ್ಬರಿಗೆ ಸರ್ಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ …

Continue Reading

ನಾಳೆ ಸಂಜೆ 5. ಘಂಟೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ.

ಆತ್ಮೀಯ ಕಾಂಗ್ರೆಸ್ ಬಂಧುಗಳೇ … ದಿನಾಂಕ 07-09-2025ನೇ ಆದಿತ್ಯವಾರ ಸಂಜೆ ಗಂಟೆ 5.00ಕ್ಕೆ ಸರಿಯಾಗಿ ಕಾರ್ಯಕರ್ತರ ಸಭೆಯ ಕಾರ್ಯಕ್ರಮವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿಯವರ ನೇತೃತ್ವದಲ್ಲಿ ನಡೆಯಲಿರುವುದು ಇಸ್ಮಾಯಿಲ್ ಕಲೆಂಬಿ ಅವರ ಮನೆಯಲ್ಲಿ ನಡೆಯಲಿದೆ ಕುಡಿಪ್ಪಾಡಿ ಗ್ರಾಮದ ವಿವಿಧ ಕಾಂಗ್ರೆಸ್ ಪದಾಧಿಕಾರಿಗಳು ಮುಂಚೂಣಿ ಘಟಕದ ಅಧ್ಯಕ್ಷರು ಕಡ್ಡಾಯವಾಗಿ ಹಾಜರಾಗ ಬೇಕಾಗಿ ವಿನಂತಿ ಮುಂದಿನ ಪಂಚಾಯತ್ ಚುನಾವಣೆ ಮತ್ತು ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಎದುರಿಸುವ ಬಗ್ಗೆ ಸಭೆಯನ್ನು ನಡೆಸುವ ಬಗ್ಗೆ ನಿರ್ಧರಿಸಲಾಗಿದೆ ಬೂತ್ ಅಧ್ಯಕ್ಷರು ತಮ್ಮ ಬೂತಿನಲ್ಲಿ ಇರುವ ಮುಂಚೂಣಿ ಘಟಕದ …

Continue Reading

ಇಂದು ಮೊಂಟೆಪದವು : ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಶನ್ AMYA (ರಿ) ಹಯಾತ್ ನಗರ ಇದರ ವತಿಯಿಂದ ಬೃಹತ್ ಮೌಲಿದ್ ಮಜ್ಲಿಸ್

ಮೊಂಟೆಪದವು : ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಶನ್ AMYA (ರಿ) ಹಯಾತ್ ನಗರ ಇದರ ವತಿಯಿಂದ ಬೃಹತ್ ಮೌಲಿದ್ ಮಜ್ಲಿಸ್ ಇಂದು (6/9/2025) ರಾತ್ರಿ 7:15 ಸ್ಥಳೀಯ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ ಬಾಕ್ರಬೈಲು ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ . ಬದ್ರಿಯ ಜುಮಾ ಮಸ್ಜಿದ್ ಮೊಂಟೆಪದವು ಖತೀಬ್ M.M.ಸಿದ್ದೀಖ್ ಸಅದಿ ಮಿತ್ತೂರ್ , ಸಾಮಣಿಗೆ ಜುಮಾ ಮಸ್ಜಿದ್ ಖತೀಬ್ ಅಬೂಬಕ್ಕರ್ ಮದನಿ ತೋಟಾಲ್ ರವರ ಉದ್ಭೋದನೆ ನೀಡಲಿದ್ದಾರೆ . ವೇದಿಕೆಯಲ್ಲಿ ಮುಹಮ್ಮದ್ ಸಲೀಂ ಮುಈನಿ ಸಖಾಫಿ ಇರುವಂಬಳ್ಳ , ಇಮ್ತಿಯಾಝ್ ಅಶ್ಅರಿ ಕೊಳಕೆ , …

Continue Reading

ಮಂಜನಾಡಿ: ಹಯಾತುಲ್ ಇಸ್ಲಾಂ ಜುಮಾ ಮಸ್ಜಿದ್ &ಮದ್ರಸ ಹಯಾತ್ ನಗರ, ಮೊಂಟೆಪದವು.

ಹಯಾತುಲ್ ಇಸ್ಲಾಂ ಜುಮಾ ಮಸೀದಿ ಮತ್ತು ಮದ್ರಸಾ ಹಯಾತ್ ನಗರ.  ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ)  ಅವರ 1500 ನೇ ಜನ್ಮ ದಿನಾಚರಣೆಯ ಅಂಗವಾಗಿ * ಅರ್ರಬೀಹ್  ಮಿಲಾದ್ ರ್ಯಾಲಿಯನ್ನು ನಡೆಸಲಾಯಿತು . ಪ್ರವಾದಿಯವರ ಕೀರ್ತನೆಗಳನ್ನು, ಪ್ರವಾದಿಯವರ ಸಂದೇಶಗಳನ್ನು ಬೋಧಿಸುತ್ತಾ, ಎಲ್ಲಾ ವಿಶ್ವಾಸಿಗಳಿಗೆ ಪ್ರವಾದಿಯವರ ಜನ್ಮದಿನದ ಶುಭಾಶಯಗಳನ್ನು ಕೋರುತ್ತಾ ನಡೆದ ರ್ಯಾಲಿಗೆ ಜುಮಾ ಮಸೀದಿ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ ಬಾಕ್ರಬೈಲು, ಮುಖ್ಯ ಶಿಕ್ಷಕ ಸಲೀಂ ಮುಈನಿ ಸಖಾಫಿ ಇರುವಂಬಲ್ಲ, ಮತ್ತು ಶಿಕ್ಷಕ ಇಮ್ತಾಯಾಜ್ ಅಶ್ರಿ ಕೊಳಕೆ ನೇತೃತ್ವ ವಹಿಸಿದ್ದರು. ಜಮಾಅತ್ ಅಧ್ಯಕ್ಷ ಕರೀಂ …

Continue Reading

ಸೆ . 6: ವಿದ್ಯುತ್ ನಿಲುಗಡೆ.

ಪುತ್ತೂರು: ನಿರ್ವಹಣಾ ಕಾಮಗಾರಿ ನಿಮಿತ್ತ 33/11 ಕೆವಿ ಕ್ಯಾಂಪ್ಟ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮುಕ್ವೆ, ಮುಕ್ರಂಪಾಡಿ, ಕೆಮ್ಮಿಂಜೆ, ಕ್ಯಾಂಪೋ ಮತ್ತು ಮುಂಡೂರು ಫೀಡರ್‌ನಲ್ಲಿ ಸೆ.06 ರಂದು ಪೂರ್ವಾಹ್ನ ಗಂಟೆ 10:00 ರಿಂದ ಅಪರಾಹ್ನ 2:00 ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

Continue Reading

ಪ್ರವಾದಿ ಮುಹಮ್ಮದ್ ಮುಸ್ತಾಫ (ಸ.ಅ) 1500ನೇ ಜನ್ಮ ದಿನಾಚರಣೆಯ ಶುಭಾಶಯಗಳು . 18 ನ್ಯೂಸ್ ಪುತ್ತೂರು

ಈದ್-ಎ-ಮಿಲಾದ್ ಮುಸ್ಲಿಮರಿಗೆ ಅಮೂಲ್ಯವಾದ ಹಬ್ಬವಾಗಿದ್ದು, ಅವರು ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸುತ್ತಾರೆ. ಇದನ್ನು ಮುಹಮ್ಮದ್ ಅವರ ಜನ್ಮದಿನ , ನಬಿ ದಿನ ಅಥವಾ ಮೌಲಿದ್ ಎಂದೂ ಕರೆಯುತ್ತಾರೆ. ಈದ್-ಎ-ಮಿಲಾದ್ ಮುಸ್ಲಿಂ ಸಮುದಾಯವು ಬಹುನಿರೀಕ್ಷಿತ ಹಬ್ಬಗಳಲ್ಲಿ ಒಂದಾಗಿದೆ . ಈ ಹಬ್ಬವು ಮುಸ್ಲಿಂ ಸಮುದಾಯಕ್ಕೆ ಸಂತೋಷವನ್ನು ತರುತ್ತದೆ. ಪ್ರಪಂಚದಾದ್ಯಂತದ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರಿಗೆ ಗೌರವ ಸಲ್ಲಿಸುತ್ತಾರೆ. ರಬಿಅಲ್-ಅವ್ವಲ್ ತಿಂಗಳ 12ನೇ ತಾರೀಖನ್ನು ಆರಂಭದಲ್ಲಿ 632 CE ರಲ್ಲಿ ಪ್ರವಾದಿ ಮುಹಮ್ಮದ್ ಅವರ ಮರಣದ ಶೋಕಾಚರಣೆಯ ದಿನವಾಗಿ ಆಚರಿಸಲಾಗುತ್ತಿತ್ತು. ಈ ಅವಧಿಯಲ್ಲಿ, ಈ ದಿನವು …

Continue Reading