ಭಾರೀ ಕುಸಿತ ಕಂಡ ಚಿನ್ನ-ಬೆಳ್ಳಿ; ಇಂದಿನ ದರವೆಷ್ಟು?
- admin_18np
- March 19, 2026
- Blog
- 0 Comments
ಅಮೆರಿಕದ ಫೆಡರಲ್ ರಿಸರ್ವ್ ಕೈಗೊಂಡ ನಿರ್ಧಾರದಿಂದಾಗಿ ಚಿನ್ನ-ಬೆಳ್ಳಿ ದರ ಏರಿಳಿತ ಕಾಣುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಿಪರೀತ ಏರಿಲ್ಲ. ಬದಲಾಗಿ ಕುಸಿಯುತ್ತಿದೆ. ಮಾರ್ಚ್ 09
ಸೋಮವಾರದಂದು ಕುಸಿದ ಶುದ್ಧ ಚಿನ್ನದ ಬೆಲೆ 16 ಸಾವಿರದ ಮಿತಿಯೊಳಗೆ ನಿಂತಿತ್ತು. ಕಳೆದ ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟಿಗೆ ಸತತ ಏರಿಕೆಯಾಗಿದ್ದು, ಮತ್ತೆ 16 ಸಾವಿರದ ಮಿತಿ ಮೀರಿ ಬೆಳೆದಿತ್ತು. ಆದರೆ ನಂತರ ಗುರುವಾರ, ಶುಕ್ರವಾರ ಮತ್ತು ಶನಿವಾರ ಸತತ ಕುಸಿತದ ನಂತರ ಚಿನ್ನದ ಬೆಲೆಯು 15 ಸಾವಿರದ ಮಿತಿಯೊಳಗೆ ಬಂದು ನಿಂತಿದೆ. ಸೋಮವಾರವೂ ತೀವ್ರ ಕುಸಿತ ಕಂಡಿದ್ದ ಚಿನ್ನದ ಬೆಲೆ ಇದೀಗ ಬುಧವಾರ ಮತ್ತು ಗುರುವಾರವೂ ಸತತ ಕುಸಿತ ಕಂಡಿದೆ.
ಅಮೆರಿಕದ ಫೆಡರಲ್ ರಿಸರ್ವ್ ಕೈಗೊಂಡ ನಿರ್ಧಾರದಿಂದಾಗಿ ಚಿನ್ನ- ಬೆಳ್ಳಿ ದರ ಏರಿಳಿತ ಕಾಣುತ್ತಿದೆ. ಅಮೆರಿಕದ ಫೆಡರಲ್ ರಿಸರ್ವ್ ಈ ವರ್ಷ ಸತತ ಎರಡು ಬಾರಿ ಪ್ರಮುಖ ಬಡ್ಡಿದರವನ್ನು ಕಡಿತಗೊಳಿಸಿದ ನಂತರ ಈ ಬಾರಿ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ. ಮಾರ್ಚ್ 18ರಂದು ಅಮೆರಿಕದ ಫೆಡರಲ್ ಓಪನ್ ಮಾರ್ಕೆಟ್ ಸಮಿತಿ (FOMC) ಸತತ ಎರಡನೇ ಬಾರಿಗೆ ಮಾನದಂಡ ಬಡ್ಡಿದರಗಳನ್ನು ಸ್ಥಿರವಾಗಿರಿಸಿದೆ. ಯುದ್ಧದಿಂದಾಗಿ ಉಂಟಾಗುವ ಹಣದುಬ್ಬರದ ಅಪಾಯ ಹೆಚ್ಚಾದ ಕಾರಣ ಮಾರುಕಟ್ಟೆ ನಿರೀಕ್ಷೆಗಳಿಗೆ ಅನುಗುಣವಾಗಿ ಕ್ರಮ
ಕೈಗೊಳ್ಳಲಾಗಿದೆ. ಈ ಕ್ರಮಗಳು ಚಿನ್ನ-ಬೆಳ್ಳಿ ದರದ ಮೇಲೆ ಪರಿಣಾಮ
ಬೀರಿದೆ.
ಮಾರ್ಚ್ 19ರಂದು ಗುರುವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬುಧವಾರ ಸಂಜೆಯ ಬೆಲೆಗೆ
ಹೋಲಿಸಿದರೆ ಪ್ರತಿ ಗ್ರಾಂಗೆ 278 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,54,640 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 255 ರೂ. ಕುಸಿತವಾಗಿ ಹತ್ತು ಗ್ರಾಂಗೆ 1,41,750 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 209 ರೂ. ಕುಸಿದು ಹತ್ತು ಗ್ರಾಂಗೆ 1,15,980 ರೂ. ಗೆ ತಲುಪಿದೆ.





