ಮಂಜನಾಡಿ: ಹಯಾತುಲ್ ಇಸ್ಲಾಂ ಜುಮಾ ಮಸ್ಜಿದ್ &ಮದ್ರಸ ಹಯಾತ್ ನಗರ, ಮೊಂಟೆಪದವು.

ಹಯಾತುಲ್ ಇಸ್ಲಾಂ ಜುಮಾ ಮಸೀದಿ ಮತ್ತು ಮದ್ರಸಾ ಹಯಾತ್ ನಗರ.

 ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ)  ಅವರ 1500 ನೇ ಜನ್ಮ ದಿನಾಚರಣೆಯ ಅಂಗವಾಗಿ * ಅರ್ರಬೀಹ್  ಮಿಲಾದ್ ರ್ಯಾಲಿಯನ್ನು ನಡೆಸಲಾಯಿತು .

ಪ್ರವಾದಿಯವರ ಕೀರ್ತನೆಗಳನ್ನು, ಪ್ರವಾದಿಯವರ ಸಂದೇಶಗಳನ್ನು ಬೋಧಿಸುತ್ತಾ, ಎಲ್ಲಾ ವಿಶ್ವಾಸಿಗಳಿಗೆ ಪ್ರವಾದಿಯವರ ಜನ್ಮದಿನದ ಶುಭಾಶಯಗಳನ್ನು ಕೋರುತ್ತಾ ನಡೆದ ರ್ಯಾಲಿಗೆ ಜುಮಾ ಮಸೀದಿ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ ಬಾಕ್ರಬೈಲು, ಮುಖ್ಯ ಶಿಕ್ಷಕ ಸಲೀಂ ಮುಈನಿ ಸಖಾಫಿ ಇರುವಂಬಲ್ಲ, ಮತ್ತು ಶಿಕ್ಷಕ ಇಮ್ತಾಯಾಜ್ ಅಶ್ರಿ ಕೊಳಕೆ ನೇತೃತ್ವ ವಹಿಸಿದ್ದರು.

ಜಮಾಅತ್ ಅಧ್ಯಕ್ಷ ಕರೀಂ ಗುದುರು, ಪ್ರಧಾನ ಕಾರ್ಯದರ್ಶಿ ಖಾಲಿದ್ ಹಾಜಿ ಭಟ್ಕಳ, ಕೋಶಾಧಿಕಾರಿ ಹನೀಫ್ ಹಾಜಿ ಗುದುರು, .ಕಾರ್ಯದರ್ಶಿ ಶಹನವಾಝ್ ಸಾಮಣಿಗೆ ಹಾಗೂ ಜಮಾತ್ ಸಮಿತಿಯ ಕಾರ್ಯಕಾರಿ ಸದಸ್ಯರು ಉಪಸ್ಥಿತರಿದ್ದರು.

✍️ 18 ನ್ಯೂಸ್ ಪುತ್ತೂರು 

Share this article!

Leave A Comment