ಇಂದು ಮೊಂಟೆಪದವು : ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಶನ್ AMYA (ರಿ) ಹಯಾತ್ ನಗರ ಇದರ ವತಿಯಿಂದ ಬೃಹತ್ ಮೌಲಿದ್ ಮಜ್ಲಿಸ್

ಮೊಂಟೆಪದವು : ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಶನ್ AMYA (ರಿ) ಹಯಾತ್ ನಗರ ಇದರ ವತಿಯಿಂದ ಬೃಹತ್ ಮೌಲಿದ್ ಮಜ್ಲಿಸ್ ಇಂದು (6/9/2025) ರಾತ್ರಿ 7:15 ಸ್ಥಳೀಯ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ ಬಾಕ್ರಬೈಲು ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ . ಬದ್ರಿಯ ಜುಮಾ ಮಸ್ಜಿದ್ ಮೊಂಟೆಪದವು ಖತೀಬ್ M.M.ಸಿದ್ದೀಖ್ ಸಅದಿ ಮಿತ್ತೂರ್ , ಸಾಮಣಿಗೆ ಜುಮಾ ಮಸ್ಜಿದ್ ಖತೀಬ್ ಅಬೂಬಕ್ಕರ್ ಮದನಿ ತೋಟಾಲ್ ರವರ ಉದ್ಭೋದನೆ ನೀಡಲಿದ್ದಾರೆ . ವೇದಿಕೆಯಲ್ಲಿ ಮುಹಮ್ಮದ್ ಸಲೀಂ ಮುಈನಿ ಸಖಾಫಿ ಇರುವಂಬಳ್ಳ , ಇಮ್ತಿಯಾಝ್ ಅಶ್ಅರಿ ಕೊಳಕೆ , …

Continue Reading

ಮಂಜನಾಡಿ: ಹಯಾತುಲ್ ಇಸ್ಲಾಂ ಜುಮಾ ಮಸ್ಜಿದ್ &ಮದ್ರಸ ಹಯಾತ್ ನಗರ, ಮೊಂಟೆಪದವು.

ಹಯಾತುಲ್ ಇಸ್ಲಾಂ ಜುಮಾ ಮಸೀದಿ ಮತ್ತು ಮದ್ರಸಾ ಹಯಾತ್ ನಗರ.  ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ)  ಅವರ 1500 ನೇ ಜನ್ಮ ದಿನಾಚರಣೆಯ ಅಂಗವಾಗಿ * ಅರ್ರಬೀಹ್  ಮಿಲಾದ್ ರ್ಯಾಲಿಯನ್ನು ನಡೆಸಲಾಯಿತು . ಪ್ರವಾದಿಯವರ ಕೀರ್ತನೆಗಳನ್ನು, ಪ್ರವಾದಿಯವರ ಸಂದೇಶಗಳನ್ನು ಬೋಧಿಸುತ್ತಾ, ಎಲ್ಲಾ ವಿಶ್ವಾಸಿಗಳಿಗೆ ಪ್ರವಾದಿಯವರ ಜನ್ಮದಿನದ ಶುಭಾಶಯಗಳನ್ನು ಕೋರುತ್ತಾ ನಡೆದ ರ್ಯಾಲಿಗೆ ಜುಮಾ ಮಸೀದಿ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ ಬಾಕ್ರಬೈಲು, ಮುಖ್ಯ ಶಿಕ್ಷಕ ಸಲೀಂ ಮುಈನಿ ಸಖಾಫಿ ಇರುವಂಬಲ್ಲ, ಮತ್ತು ಶಿಕ್ಷಕ ಇಮ್ತಾಯಾಜ್ ಅಶ್ರಿ ಕೊಳಕೆ ನೇತೃತ್ವ ವಹಿಸಿದ್ದರು. ಜಮಾಅತ್ ಅಧ್ಯಕ್ಷ ಕರೀಂ …

Continue Reading

ಸೆ . 6: ವಿದ್ಯುತ್ ನಿಲುಗಡೆ.

ಪುತ್ತೂರು: ನಿರ್ವಹಣಾ ಕಾಮಗಾರಿ ನಿಮಿತ್ತ 33/11 ಕೆವಿ ಕ್ಯಾಂಪ್ಟ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮುಕ್ವೆ, ಮುಕ್ರಂಪಾಡಿ, ಕೆಮ್ಮಿಂಜೆ, ಕ್ಯಾಂಪೋ ಮತ್ತು ಮುಂಡೂರು ಫೀಡರ್‌ನಲ್ಲಿ ಸೆ.06 ರಂದು ಪೂರ್ವಾಹ್ನ ಗಂಟೆ 10:00 ರಿಂದ ಅಪರಾಹ್ನ 2:00 ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

Continue Reading

ಪ್ರವಾದಿ ಮುಹಮ್ಮದ್ ಮುಸ್ತಾಫ (ಸ.ಅ) 1500ನೇ ಜನ್ಮ ದಿನಾಚರಣೆಯ ಶುಭಾಶಯಗಳು . 18 ನ್ಯೂಸ್ ಪುತ್ತೂರು

ಈದ್-ಎ-ಮಿಲಾದ್ ಮುಸ್ಲಿಮರಿಗೆ ಅಮೂಲ್ಯವಾದ ಹಬ್ಬವಾಗಿದ್ದು, ಅವರು ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸುತ್ತಾರೆ. ಇದನ್ನು ಮುಹಮ್ಮದ್ ಅವರ ಜನ್ಮದಿನ , ನಬಿ ದಿನ ಅಥವಾ ಮೌಲಿದ್ ಎಂದೂ ಕರೆಯುತ್ತಾರೆ. ಈದ್-ಎ-ಮಿಲಾದ್ ಮುಸ್ಲಿಂ ಸಮುದಾಯವು ಬಹುನಿರೀಕ್ಷಿತ ಹಬ್ಬಗಳಲ್ಲಿ ಒಂದಾಗಿದೆ . ಈ ಹಬ್ಬವು ಮುಸ್ಲಿಂ ಸಮುದಾಯಕ್ಕೆ ಸಂತೋಷವನ್ನು ತರುತ್ತದೆ. ಪ್ರಪಂಚದಾದ್ಯಂತದ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರಿಗೆ ಗೌರವ ಸಲ್ಲಿಸುತ್ತಾರೆ. ರಬಿಅಲ್-ಅವ್ವಲ್ ತಿಂಗಳ 12ನೇ ತಾರೀಖನ್ನು ಆರಂಭದಲ್ಲಿ 632 CE ರಲ್ಲಿ ಪ್ರವಾದಿ ಮುಹಮ್ಮದ್ ಅವರ ಮರಣದ ಶೋಕಾಚರಣೆಯ ದಿನವಾಗಿ ಆಚರಿಸಲಾಗುತ್ತಿತ್ತು. ಈ ಅವಧಿಯಲ್ಲಿ, ಈ ದಿನವು …

Continue Reading

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಪ್ರಕರಣ- ಆರೋಪಿ ಶ್ರೀಕೃಷ್ಣ ಜೆ.ರಾವ್ ಜೈಲಿನಿಂದ ಬಿಡುಗಡೆ

ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿ ಮದುವೆಯಾಗಲು ನಿರಾಕರಿಸಿ ವಂಚಿಸಿರುವ ಆರೋಪದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜೆ.ರಾವ್ ಇದೀಗ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಗೆ ಕರ್ನಾಟಕ ಹೈಕೋರ್ಟ್‌ ಸೆ.೩ರಂದು ಜಾಮೀನು ಮಂಜೂರು ಮಾಡಿತ್ತು. ಬಳಿಕ ಪುತ್ತೂರು ನ್ಯಾಯಾಲಯದಲ್ಲಿ ಜಾಮೀನಿಗೆ ಸಂಬಂಧಿಸಿದ ಭದ್ರತೆ ಮತ್ತಿತರ ಪ್ರಕ್ರಿಯೆಗಳನ್ನು ಸೆ.೪ರಂದು ಮುಗಿಸಿ ಆರೋಪಿಯನ್ನು ಮಂಗಳೂರು ಜೈಲಿನಿಂದ ಬಿಡುಗಡೆಗೊಳಿಸಿ ಕರೆತರಲಾಗುತ್ತಿದೆ ಎಂದು ಮಾಹಿತಿ ಲಭಿಸಿದೆ.

Continue Reading

ಮಾನವೀಯತೆ ಮೆರೆದ ಸ್ಪೀಕರ್ . ಯು ಟಿ ಕೆ .

ಮಾನವೀಯತೆ ಮೆರೆದ ಸ್ಪೀಕರ್ ಘಟನೆ ನಡೆದ ಬಳಿಕ ಹೈದರ್ ಅವರ ಅಂತ್ಯಸಂಸ್ಕಾರ ರಾತ್ರಿಯೇ ಮಾಡಿ ಮುಗಿಸಲು ಕುಟುಂಬಸ್ಥರು ಯೋಚಿಸಿದ್ದರು. ಆದರೆ ಅವರ ಏಕೈಕ ಸಹೋದರ ಹಸೈನಾರ್ ಮತ್ತವರ ಕುಟುಂಬ ಬೆಂಗಳೂರಿನಲ್ಲಿದ್ದ ಕಾರಣಸಮಯಕ್ಕೆ ಸರಿಯಾಗಿ ಅಜ್ಜಿನಡ್ಕ ತಲುಪುವುದು ಅಸಾಧ್ಯ ಎನಿಸಿತ್ತು. ಈ ಬಗ್ಗೆ ಮಾಹಿತಿ ಪಡೆದ ಸ್ಪೀಕರ್ ಖಾದರ್ ತಕ್ಷಣಕ್ಕೆ ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿ ಕುಟುಂಬಸ್ಥರನ್ನು ಸಮಯಕ್ಕೆ ತಲುಪುವಂತೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ

Continue Reading

BIGNEWS : ಆನ್ಲೈನ್ ಗೇಮ್ಗಳ ನಿಷೇಧಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ | Bill Pass

ನವದೆಹಲಿ, ಆಗಸ್ಟ್ 20, 2025: ಆನ್‌ಲೈನ್ ಗೇಮಿಂಗ್‌ನಲ್ಲಿ ಹೆಚ್ಚುತ್ತಿರುವ ವ್ಯಸನ ಮತ್ತು ಅಕ್ರಮ ಹಣ ವರ್ಗಾವಣೆಯನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆನ್‌ಲೈನ್ ಬೆಟ್ಟಿಂಗ್ ಆಟಗಳನ್ನು ನಿಷೇಧಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಈ ಮಸೂದೆಯು ಇದೀಗ ಲೋಕಸಭೆಯಲ್ಲಿ ಬುಧವಾರದಂದು ಅಂಗೀಕಾರಗೊಂಡಿದ್ದು, ದೇಶಾದ್ಯಂತ ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಆಪ್‌ಗಳ ಮೇಲೆ ಕಾನೂನಿನ ಕಡಿವಾಣ ಹೇರಲು ಮಾರ್ಗ ಸುಗಮವಾಗಿದೆ. ಈ ಕಾನೂನು ಜಾರಿಗೆ ಬಂದರೆ, ಆನ್‌ಲೈನ್ ಗೇಮಿಂಗ್‌ನ ದುರುಪಯೋಗವನ್ನು ನಿಯಂತ್ರಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ ಈ ಪ್ರಸ್ತಾವಿತ ಮಸೂದೆಯು ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಸಂಬಂಧಿಸಿದ ಆನ್‌ಲೈನ್ …

Continue Reading

ಪ್ರಾಕೃತಿಕ ವಿಕೋಪದಿಂದ ಉಂಟಾದ ಅಡಿಕೆ,ತೆಂಗು ಇನ್ನಿತರ ಕೃಷಿ ನಾಶದಿಂದ ಉಂಟಾಗುವ ನಷ್ಟಗಳಿಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಪರಿಹಾರ ಒದಗಿಸಬೇಕು 🖊️ ಎಂ.ಎ. ರಫೀಕ್ ಸದಸ್ಯರು ಗ್ರಾಮ ಪಂಚಾಯತ್ ಸವಣೂರು (ಅಧ್ಯಕ್ಷರು SDPI ಬೆಳ್ಳಾರೆ ಬ್ಲಾಕ್)

ಸವಣೂರು: ಆಗಸ್ಟ್: 20 ದಕ್ಷಿಣ ಕನ್ನಡ ಜಿಲ್ಲೆಯ ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಬೆಳಗ್ಗಿನ ಜಾವ ಸಂಭವಿಸಿದ ಭೀಕರ ಗಾಳಿಗೆ ಸವಣೂರು ಗ್ರಾಮದ ಇಡ್ಯಾಡಿ,ಅತಿಕರೆ,ಅರೆಲ್ತಡಿ, ಕೆಡೆಂಜಿ ಹಾಗೂ ಇನ್ನೂ ಅನೇಕ ಸ್ಥಳಗಳಲ್ಲಿ ಜೀವನ ನಡೆಸಲು ಆದಾಯದ ಮೂಲವಾಗಿರುವ ಅಡಿಕೆ, ಮತ್ತು ತೆಂಗು ಕೃಷಿಕರು ಕಷ್ಟಪಟ್ಟು ಬೆಳೆಸಿದ ಬಹಳಷ್ಟು ಜನರ ಕೃಷಿಯು ಸಂಪೂರ್ಣ ನಾಶವಾಗಿರುತ್ತದೆ. ಇದು ಒಂದು ಪ್ರಾಕೃತಿಕ ವಿಕೋಪ ವಾಗಿದ್ದು, ರಾಜ್ಯ ಸರ್ಕಾರದ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ ಈಗ ಪರಿಹಾರಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಈ ರೀತಿಯ ಕೃಷಿ ನಾಶಗಳನ್ನು ಕೂಡ ಪ್ರಾಕೃತಿಕ …

Continue Reading

ತಾಜುಲ್ ಫುಖಾಹ್ ಬೇಕಲ್ ಉಸ್ತಾದ್ ಆಂಡ್ ನೇರ್ಚೆ ಯಶಸ್ವಿಗೆ ತಾಜುಲ್ ಉಲಮಾ ಹೆಲ್ಫ್ ವಿಂಗ್ ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಶನ್ ಕರೆ*

ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ ಪ್ರಧಾನ ಶಿಷ್ಯ ,ಸಾವಿರಾರು ವಿದ್ವಾಂಸರನ್ನು ಸಮಾಜಕ್ಕರ್ಪಿಸಿದ ತಾಜುಲ್ ಫುಖಹಾಅ್ ಶೈಖುನಾ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ರವರ ಐದನೇ ಆಂಡ್ ನೇರ್ಚೆ 2025 ಅಗಸ್ಟ್ 22,23،24، ದಿನಾಂಕಗಳಲ್ಲಿ ಮರಿಕ್ಕಳ ಮಸ್ಜಿದ್ ನಲ್ಲಿ ನಡೆಯಲಿದೆ. ಎಲ್ಲಾ ಸುನ್ನೀ ಕಾರ್ಯಕರ್ತರು ಉಸ್ತಾದರ ಅಭಿಮಾನಿಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಜುಲ್ ಉಲಮಾ ಹೆಲ್ಫ್ ವಿಂಗ್ ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಶನ್ ಚೇರ್ ಮೆನ್ ಖಾಲಿದ್ ಹಾಜಿ ಭಟ್ಕಳ ,ಪ್ರಧಾನ ಕಾರ್ಯದರ್ಶಿ ಫಝಲ್ ಮುಡಿಪು ,ಫೈನಾನ್ಸಿಯಲ್ ಕಾರ್ಯದರ್ಶಿ A.M. ಜಾವಿದ್  ಮೊಂಟೆಪದವು ಪತ್ರಿಕಾ ಪ್ರಕಟನೆಯಲ್ಲಿ …

Continue Reading