ಮಂಗಳೂರು; ತಾಜುಲ್ ಉಲಮಾ ಹೆಲ್ಪ್ ವಿಂಗ್ ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಶನ್ (ರಿ) ಇದರ ವತಿಯಿಂದ ಎರಡನೇ ಆ್ಯಂಬುಲೆನ್ಸನ್ನು ಖುರ್ರತುಸ್ಸಾದಾತ್ ಸಯ್ಯಿದ್ ಪಝಲ್ ಕೋಯಮ್ಮ ತಂಙಳ್ ಕೂರತ್ ರವರ ಸ್ಮರಣಾರ್ಥವಾಗಿ ಕರ್ನಾಟಕ ರಾಜ್ಯ ವಿಧಾನಸಭಾಧ್ಯಕ್ಷ ಹಾಜಿ UT ಖಾದರ್ ಫರೀದ್ ರವರು ಲೋಕಾರ್ಪಣೆಗೈದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ಅಲ್ ಬುಖಾರಿ ಕೂರತ್ ಹಿತೋಪದೇಶ ನೀಡಿದರು.
ಸಭೆಯಲ್ಲಿ ಮಾತನಾಡಿದ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ T.M.ಮುಹಿಯ್ಯದ್ದೀನ್ ಸಖಾಫಿ ತೋಕೆಯವರು ತಾಜುಲ್ ಉಲಮಾ ಹೆಲ್ಫ್ ವಿಂಗ್ ಮಾಡುತ್ತಿರುವ ಜನ ಸೇವೆ,ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಪ್ರಶಂಸಿದರು. SM ರಶೀದ್ ಹಾಜಿಯವರು ಸಾಂದರ್ಭಿಕವಾಗಿ ಮಾತನಾಡಿದರು.
SჄS ರಾಜ್ಯ ನಾಯಕ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ . B.S.ಇಸ್ಮಾಯಿಲ್ ಮಂಗಳೂರುS.A.ಆಸಿಫ್ ಸಾಮಣಿಗೆ , ಜಪ್ಪಿನ ಮೊಗರು ಖತೀಬ್ ಅಶ್ರಫ್ ಸಅದಿ ವಿಂಗ್ ನಾಯಕರಾದ M.M.ಅಬೂಬಕ್ಕರ್ ಮುಸ್ಲಿಯಾರ್ ಮೋಂಟೆಪದವು ,ಹಬೀಬುರ್ರಹ್ಮಾನ್ ಸಂಪಿಲ, ಮುದಸ್ಸಿರ್ ಇರ್ಷಾದ್ ಸಮೀರ್ ದೇರಳಕಟ್ಟೆ , ಸುಲೈಮಾನ್ ಹಾಜಿ ದೇರಳಕಟ್ಟೆ ಉಪಸ್ಥಿತರಿದ್ದರು . ವಿಂಗ್ ಅಧ್ಯಕ್ಷ ಖಾಲಿದ್ ಹಾಜಿ ಯವರು ಸ್ವಾಗತಿಸಿದರು .
ಪ್ರಧಾನ ಕಾರ್ಯದರ್ಶಿ ಪಝಲ್ ಮುಡಿಪು ರವರು ಕಾರ್ಯಕ್ರಮ ನಿರೂಪಿಸಿದರು .