Delhi blast ಆತ್ಮಾಹುತಿ ದಾಳಿಯಲ್ಲ; ಭಯದಿಂದ, ಆತುರದಲ್ಲಿ ಸ್ಫೋಟ ಸಂಭವಿಸಿದೆ’

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ಸಂಜೆ ನಡೆದ ಭಯೋತ್ಪಾದಕ ದಾಳಿಯ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಕಾರು ಸ್ಫೋಟವು ಆತ್ಮಹುತಿ ಬಾಂಬ್ ಸ್ಫೋಟವಲ್ಲ. ಬದಲಿಗೆ ಶಂಕಿತ ಭಯಭೀತನಾಗಿ ಆತುರದಲ್ಲಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಸೂಚಿಸುತ್ತದೆ.

ಭದ್ರತಾ ಸಂಸ್ಥೆಗಳು ಭಯೋತ್ಪಾದಕ ಜಾಲಗಳಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಫರಿದಾಬಾದ್, ಸಹರಾನ್‌ಪುರ, ಪುಲ್ವಾಮಾ ಮತ್ತು ಇತರ ಪ್ರದೇಶಗಳಲ್ಲಿ ಗಮನಾರ್ಹ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ.

Share this article!

Leave A Comment