ಅ.4 ಓಲೆಮುಂಡೋವು ದರ್ಗಾ ಶರೀಫ್ ನೂತನ ಕಟ್ಟಡ ಉದ್ಘಾಟನೆ.

ಇತಿಹಾಸ ಪ್ರಸಿದ್ಧ ಝಿಯಾರತ್(ಪ್ರಾರ್ಥನಾ) ಕೇಂದ್ರವೂ, ಜಾತಿ, ಮತ ಬೇಧವಿಲ್ಲದೇ ಸರ್ವಧಮೀರ್ಯರಿಂದಲೂ ಗೌರವಿಸಲ್ಪಡುವ ಕೆಯ್ಯರು ಗ್ರಾಮದ ಓಲೆಮುಂಡೋವು ವಲಿಯುಲ್ಲಾಹಿ ಮಶ್‌ರ್ (ಖ.ಸಿ) ದರ್ಗಾದ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಅದರ ಉದ್ಘಾಟನಾ ಸಮಾರಂಭ 04-10-2025ನೇ ಶನಿವಾರ ಪೂರ್ವಾಹ್ನ ಗಂಟೆ 11-00ಕ್ಕೆ ಸರಿಯಾಗಿ ನಡೆಯಲಿದೆ ಎಂದು ನೂತನ ಕಟ್ಟಡದ ಸ್ವಾಗತ ಸಮಿತಿ ಸದಸ್ಯ ಖಲಂದರ್ ಶಾಫಿ ಎರಬೈಲ್ ಹೇಳಿದರು.

 

 

ಅ.1ರಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಓಲೆಮುಂಡೋವು ಪ್ರಶಾಂತ ಪರಿಸರದಲ್ಲಿರುವ ದರ್ಗಾ ಶರೀಫ್‌ನಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಉರೂಸ್ ಸಮಾರಂಭ ನಡೆಯುತ್ತಿದ್ದು ಅದರಲ್ಲಿ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ದರ್ಗಾ ಝಿಯಾರತ್ ನೆರವೇರಿಸುತ್ತಾರೆ. ಇತರ ದಿನಗಳಲ್ಲೂ ಇಲ್ಲಿಗೆ ಝಿಯಾರತ್‌ಗೆಂದು ಭಕ್ತಾದಿಗಳು ಆಗಮಿಸುತ್ತಿದ್ದು ಈ ದರ್ಗಾ ಪವಾಡ ಕೇಂದ್ರವಾಗಿ ಗುರುತಿಸಿಕೊಂಡಿದೆ.

ದರ್ಗಾದ ಕಟ್ಟಡ ಹಿಂದಿನ ಕಾಲದಲ್ಲಿ ನಿರ್ಮಿಸಿದ್ದು ಇದೀಗ ಸ್ಥಳಾವಕಾಶದ ಕೊರತೆ ಹಿನ್ನೆಲೆಯನ್ನು ಹೊಸ ಕಟ್ಟಡವನ್ನು ಕಟ್ಟುವ ಬಗ್ಗೆ ಓಲೆಮುಂಡೋವು ಜಮಾಅತ್ ಕಮಿಟಿಯು 2 ವರ್ಷಗಳ ಹಿಂದೆ ಅಂದಿನ ಜಮಾಅತ್ ಅಧ್ಯಕ್ಷರಾಗಿದ್ದ ಮರ್ಹೂಂ ಪುತ್ತುಮೋನು ಹಾಜಿ ಬಲ್ನಾಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿ ಕಾಮಗಾರಿ ಆರಂಭಿಸಿದ್ದು ಇದೀಗ ಆಧುನಿಕ ರೀತಿಯಲ್ಲಿ ವಿಶಾಲ ಸ್ಥಳಾವಕಾಶದೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ ಎಂದರು.

 

 

ಪತ್ರಿಕಾಗೋಷ್ಠಿಯಲ್ಲಿ ದರ್ಗಾ ನೂತನ ಕಟ್ಟಡ ಸ್ವಾಗತ ಸಮಿತಿಯ ಅಧ್ಯಕ್ಷ ರಜಾಕ್ ಎರಬೈಲ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಎರಬೈಲ್, ಜಮಾಅತ್ ಕಾರ್ಯದರ್ಶಿ ಇಸ್ಮಾಯಿಲ್ ಸೊರಕೆ, ಜೊತೆ ಕಾರ್ಯದರ್ಶಿ ಹಂಝ ಎಲಿಯ ಉಪಸ್ಥಿತರಿದ್ದರು.

Share this article!

Leave A Comment