MUDA Scam: ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಮಹತ್ವದ ಬೆಳವಣಿಗೆ! ಮಾಜಿ ಆಯುಕ್ತ ದಿನೇಶ್‌ ಕುಮಾರ್ ಬಂಧನ!

ಕರ್ನಾಟಕದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣವು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಇಡಿ ಅಧಿಕಾರಿಗಳು ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ (Dinesh Kumar) ಬಂಧನ ಮಾಡಿದೆ.

ಬೆಂಗಳೂರು, ಸೆಪ್ಟೆಂಬರ್ 16, 2025: ಕರ್ನಾಟಕದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣವು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ಇದೀಗ ಈ ಹಗರಣದಲ್ಲಿ ಮುಡಾದ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ED) ತನಿಖೆಯಲ್ಲಿ ಬಹಿರಂಗವಾಗಿದೆ. ಇನ್ನು ಇಡಿ ಅಧಿಕಾರಿಗಳು ದಿನೇಶ್ ಕುಮಾರ್‌ ಆಸ್ತಿಗಳ ಮೇಲೆ ದಾಳಿ ನಡೆಸಿ, ಕೋಟ್ಯಂತರ ರೂಪಾಯಿಗಳ ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿಕೊಂಡಿದ್ದರು. ಇದೀಗ ಇಡಿ ಅಧಿಕಾರಿಗಳು ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ (Dinesh Kumar) ಬಂಧನ ಮಾಡಿದೆ

ಅಕ್ರಮವಾಗಿ ಮುಡಾ ಸೈಟ್ ಹಂಚಿಕೆ ಆರೋಪದಡಿ ಮಾಜಿ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ತನಿಖೆ ನಡೆಯುತ್ತಲೇ ಇತ್ತು. ಅನರ್ಹ ವ್ಯಕ್ತಿಗಳಿಗೆ ಪರಿಹಾರ ರೂಪದಲ್ಲಿ ನಿವೇಶನಗಳ ಹಂಚಿಕೆಯಲ್ಲಿ ದಿನೇಶ್ ಕುಮಾರ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಸಾಬೀತಾಗಿದೆ. ಇನ್ನು ಮುಡಾ ಸೈಟ್ ಹಗರಣ ಬಗ್ಗೆ ತನಿಖೆ ನಡೆಸಿದ್ದ ಇಡಿ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರನ್ನು ಬಂಧನ ಮಾಡಿದೆ.

ಇದನ್ನೂ ಓದಿ:

MUDA Scam: ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಮಹತ್ವದ ಬೆಳವಣಿಗೆ! ಮಾಜಿ ಆಯುಕ್ತ ದಿನೇಶ್‌ ಕುಮಾರ್ ಬಂಧನ!

ಮುಡಾ 50:50 ಹಗರಣ ವಿಚಾರ ಇದೀಗ ಮತ್ತೆ ತಲೆಡತ್ತಿದೆ. ಕಾನೂನು ಬಾಹಿರವಾಗಿ ಸೈಟು ಹಂಚಿದ್ದ ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್‌ಗೆ ಕಾನೂನು ಸಂಕಷ್ಟ ಎದುರಾಗಿದೆ. ಸಾವಿರಾರು ಸೈಟುಗಳನ್ನು ಬಿಲ್ಡರ್ ಜಯರಾಮು, ಕಾರ್ತಿಕ್ ಬಡಾವಣೆ ಮಂಜುನಾಥ್ ಸೇರಿ ಅನೇಕ ಬಿಲ್ಡರ್ಗಳಿಗೆ, ಕಂಡ ಕಂಡವರಿಗೆ ನಕಲಿ ದಾಖಲೆ ಸೃಷ್ಟಿಸಿಕೊಂಡು ಸೈಟು ಹಂಚಿಕೆ ಆರೋಪದಡಿ ಇದೀಗ ಇಡಿ ಅರೆಸ್ಟ್ ಮಾಡಿದೆ

ಜಮೀನು ವಶಕ್ಕೆ ಪಡೆದು ನಿವೇಶನ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದ್ದ ದಿನೇಶ್ ಕುಮಾರ್, ತನಿಖೆ ವೇಳೆ ಜಮೀನು ವಶಕ್ಕೆ ಪಡೆಯದೇ ಪ್ರಭಾವಿಗಳಿಗೆ ಸೈಟು ಹಂಚಿಕೆ ಮಾಡಿರುವುದು ಸಾಬೀತಾಗಿದೆ. ಇನ್ನು ಕೋಟಿ ಕೋಟಿ ಬೆಲೆ ಬಾಳುವ ಸೈಟುಗಳನ್ನು ಲಕ್ಷ ರುಪಾಯಿಗೆ ಕೊಟ್ಟು ಕಿಕ್ ಬ್ಯಾಕ್ ಪಡೆದಿದ್ದ ದಿನೇಶ್ ಕುಮಾರ್, ಮುಡಾಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ ಎಂದು ವರದಿಯಾಗಿದೆ.

ಏನಿದು ಮುಡಾ ಹಗರಣ?

ಮುಡಾ ಹಗರಣ (MUDA Scam) ಎಂಬುದು ಕರ್ನಾಟಕದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (Mysore Urban Development Authority – MUDA) ಸಂಸ್ಥೆಯಲ್ಲಿ ನಡೆದ ಆರೋಪಿತ ಅಕ್ರಮ ನಿವೇಶನ ಹಂಚಿಕೆಗೆ ಸಂಬಂಧಿಸಿದ ದೊಡ್ಡ ಹಗರಣವಾಗಿದೆ. ಈ ಪ್ರಕರಣವು 2024ರಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಇನ್ನು ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಭಾರೀ ಆರೋಪಗಳು ಕೇಳಿಬಂದಿತ್ತು. ಇದನ್ನೇ ಲಾಭವಾಗಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ಇದನ್ನು ರಾಜಕೀಯ ಆಯುಧವಾಗಿ ಬಳಸಿಕೊಂಡಿವೆ.

ಹಗರಣದ ಹಿನ್ನೆಲೆ

ಮುಡಾ (MUDA) ಎಂಬುದು ಮೈಸೂರು ಮತ್ತು ಸುತ್ತಮುತ್ತಲ ನಗರಾಭಿವೃದ್ಧಿಗೆ ಜವಾಬ್ದಾರಿ ಹೊಂದಿರುವ ಸರ್ಕಾರಿ ಸಂಸ್ಥೆ. ಈ ಸಂಸ್ಥೆಯು ನಗರದಲ್ಲಿ ರಸ್ತೆಗಳು, ಉದ್ಯಮಗಳು ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ಜನರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಸ್ವಾಧೀನಗೊಳಿಸಿದ ಜಮೀನುಗಳ ಬದಲಿಗೆ, ಜನರಿಗೆ ಸಮಾನ ಮೌಲ್ಯದ ನಿವೇಶನಗಳನ್ನು (ಸೈಟ್‌ಗಳು) ಹಂಚಲಾಗುತ್ತದೆ. ಈ ನೀತಿಯನ್ನು “50-50 ಅನುಪಾತ” ಎಂದು ಕರೆಯುತ್ತಾರೆ, ಅಂದರೆ ಸ್ವಾಧೀನಗೊಳಿಸಿದ ಜಮೀನಿನ 50% ಮುಡಾ ಉಳಿಸಿಕೊಳ್ಳುತ್ತದೆ ಮತ್ತು ಉಳಿದ 50% ಪೀಡಿತರಿಗೆ ಹಂಚುತ್ತದೆ.

ಆದರೆ, ಈ ನೀತಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು 2024ರಲ್ಲಿ ಬಹಿರಂಗವಾದವು. ಮುಖ್ಯವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರ ಹೆಸರಿನಲ್ಲಿ 14 ನಿವೇಶನಗಳನ್ನು (ಸೈಟ್‌ಗಳು) ಅಕ್ರಮವಾಗಿ ಹಂಚಲಾಗಿದೆ ಎಂದು ಆರೋಪಿಸಲಾಯಿತು. ಇದಲ್ಲದೆ, ಒಟ್ಟು 55ಕ್ಕೂ ಹೆಚ್ಚು ಸೈಟ್‌ಗಳಲ್ಲಿ ಅಕ್ರಮ ಹಂಚಿಕೆ ನಡೆದಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಗರಣದ ಮೌಲ್ಯವು ಬಹುಕೋಟಿ ರೂಪಾಯಿಗಳಲ್ಲಿದೆ ಎಂದು ಹೇಳಲಾಗುತ್ತದೆ, ಮತ್ತು ಇದು ರಾಜ್ಯದ ರಾಜಕಾರಣದಲ್ಲಿ ಭಾರೀ ಚರ್ಚೆಗೂ ಗ್ರಾಸವಾಯಿತು.

 

Share this article!

Leave A Comment