ಕರ್ನಾಟಕ ಮುಸ್ಲಿಂ ಜಮಾಅತ್ ಮೋಂಟುಗೋಳಿ ಸರ್ಕಲ್ ಸ್ವಾತಂತ್ರ್ಯೋತ್ಸವ ಹಾಗೂ ಮಾದಕ ವ್ಯಸನ ವಿರುದ್ಧ ಜನ ಜಾಗೃತಿ ಜಾಥ
ಮೊಂಟೆಪದವು ತಾಜುಲ್ ಉಲಮಾ ಸುನ್ನೀ ಸೆಂಟರ್ ನಿಂದ ಪ್ರಾರಂಭಿಸಿ ಗೌಸಿಯ ಕಮ್ಯುನಿಟಿ ಹಾಲ್ ಮೋಂಟುಗೋಳಿ ವರೆಗೆ ಜನ ಜಾಗೃತಿ ಜಾಥಾ ನಡೆಸಲಾಯಿತು.
ತದ ನಂತರ ಮುಹಮ್ಮದ್ ಬಾವ ಹಾಜಿ ನಡುಪದವು ರವರ ಅಧ್ಯಕ್ಷತೆಯಲ್ಲಿ ಗೌಸಿಯಾ ಕಮ್ಯೂನಿಟಿ ಹಾಲ್ ಮೋಂಟುಗೋಳಿಯಲ್ಲಿ ಸಮಾರೋಪ ಸಮಾರಂಭ ನಡೆಯಿತು . ಸಯ್ಯಿದ್ ಫತಹುದ್ದೀನ್ ತಂಙಳ್ ಉಧ್ಘಾಟಿಸಿದರು.
SMA ಮೋಂಟುಗೋಳಿ ರೀಜಿನಲ್ ಪ್ರಧಾನ ಕಾರ್ಯದರ್ಶಿ M M A ಸಿದ್ದೀಖ್ ಸಅದಿ ಮಿತ್ತೂರ್ ಹಾಗೂ ಜನ ಶಿಕ್ಷಣ ಟ್ರಸ್ಟ್ ನಾಯಕ ಶೀನ ಶೆಟ್ಟಿ , SJM ಪ್ರಧಾನ ಕಾರ್ಯದರ್ಶಿ ರಫೀಖ್ ಸಅದಿ ಕಡಬ ರವರು ವಿಷಯ ಮಂಡಿಸಿ ಜನ ಜಾಗೃತಿ ಮೂಡಿಸಿದರು. ವೇದಿಕೆಯಲ್ಲಿ ಸಾಮಣಿಗೆ ಮದನಿ ,M.S. ಸುಲೈಮಾನ್ ಮೋಂಟುಗೋಳಿ , ಕೃಷ್ಣ ಮೂಲ್ಯ, ಶಶಿಕಾಂತ ಜನ ಶಿಕ್ಷಣ ಟ್ರಸ್ಟ್ , ಸಮಾಜ ಸೇವಕ ಇಸ್ಮಾಯಿಲ್ ಕಣಂದೂರು ,SMA ಮೋಂಟುಗೋಳಿ ರೀಜಿನಲ್ ಅಧ್ಯಕ್ಷ ಖಾಲಿದ್ ಹಾಜಿ ಭಟ್ಕಳ,SჄS ಮೋಂಟುಗೋಳಿ ಸರ್ಕಲ್ ಪ್ರಧಾನ ಕಾರ್ಯದರ್ಶಿ ಅಝರ್ ಮರಿಕ್ಕಳ, ಸಾಂತ್ವನ ಇಸಾಬ ಕಾರ್ಯದರ್ಶಿ ಇಬ್ರಾಹಿಂ ಪೂಡಲ್ ,SSF ಮೋಂಟುಗೋಳಿ ಸೆಕ್ಷರ್ ಪ್ರಧಾನ ಕಾರ್ಯದರ್ಶಿ C.H .ಶಾಕಿರ್ ಚಂದಹಿತ್ಲು ,ಕರ್ನಾಟಕ ಮುಸ್ಲಿಂ ಜಮಾಅತ್ ನ ನಾಯಕರಾದ ಅಬ್ದುಲ್ ಖಾದರ್ ಸಖಾಫಿ ದಾರುನ್ನಜಾತ್ ,MM ಅಬೂಬಕ್ಕರ್ ಮುಸ್ಲಿಯಾರ್ ಮೊಂಟೆಪದವು , ಬಾವ ಹಾಜಿ ಪಡಿಕ್ಕಲ್ , ಸುಲೈಮಾನ್ ಹಾಜಿ ಸಾಮಣಿಗೆ ,K.P.ಅಬೂಬಕ್ಕರ್ ಹಾಜಿ ,ಅಝೀಝ್ ತಡಂಗಾಯಿ , ಅಬ್ಬು ಕಲ್ಲರ್ಬೆ ಉಪಸ್ಥಿತರಿದ್ದರು .
ಅಲಿ ಕುಂಙ್ಞಿ ಮೋಂಟುಗೋಳಿ ಸ್ವಾಗತಿಸಿ ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಬಶೀರ್ ಮಜಲುರವರು ವಂದಿಸಿದರು .