ಮಂಜನಾಡಿ; ಎಪ್ಪತ್ತೊಂಬತನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಯಾತುಲ್ ಇಸ್ಲಾಂ ಮದ್ರಸಾ ಹಯಾತ್ ನಗರ, ಇದರ ಮದ್ರಸಾ ವಠಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಯಿತು. ಹಯಾತುಲ್ ಇಸ್ಲಾಂ ಜುಮಾ ಮಸೀದಿ ಹಾಗೂ ಮದ್ರಸಾದ ಅಧ್ಯಕ್ಷರಾದ ಕರೀಂ ಗುದುರು, ಪ್ರಧಾನ ಕಾರ್ಯದರ್ಶಿ ಖಾಲಿದ್ ಹಾಜಿ ಭಟ್ಕಳ ಧ್ವಜಾರೋಹಣಕ್ಕೆ ನೇತೃತ್ವ ನೀಡಿದರು. ಮಸೀದಿಯ ಖತೀಬರಾದ ಅಬ್ದುರ್ರಹ್ಮಾನ್ ಸಖಾಫಿ ಬಾಕ್ರಬೈಲ್ ಪ್ರಾರ್ಥನೆ ನೆರವೇರಿಸಿದರು. ಸದರ್ ಮುಅಲ್ಲಿ ಸಲೀಂ ಸಖಾಫಿ ಅಲ್ ಮುಈನೀ ಇರುವಂಬಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಿದ್ಯಾರ್ಥಿಗಳಾದ ಶಾಮಿಲ್, ಶಾಝಿಲ್, ಇಶಾತ್, ಜಲಾಲ್ ಇವರು ದೇಶಭಕ್ತಿ ಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಜಮಾಅತ್ ಕಮಿಟಿ ಆಡಳಿತದವರು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.