ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ನಿವಾಸಿಗಳು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿರಂತರ ವಿದ್ಯುತ್ ಕಡಿತ, ಅಸ್ಥಿರ ವಿದ್ಯುತ್ ಪೂರೈಕೆಯ ಕುರಿತು ಯುವಕರು ಅಧಿಕಾರಿಗಳ ನಿಷ್ಕ್ರಿಯತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ ದೂರಿದ್ದಾರೆ
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ನಿವಾಸಿಗಳು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿರಂತರವಾದ ವಿದ್ಯುತ್ ಕಡಿತ, ಅಸ್ಥಿರ ವಿದ್ಯುತ್ ಪೂರೈಕೆ ಯುವಕರು ಮತ್ತು ಅಧಿಕಾರಿಗಳು ನಿಷ್ಕ್ರಿಯತೆಯಿಂದ ಬೇಸತ್ತಿದ್ದಾರೆ. ಇದೀಗ ಗ್ರಾಮದ ಯುವಕರು ಸೋಲಾರ್ ಬೀದಿ ದೀಪಗಳ ಕೆಳಗೆ ಕೂಡಿ, ಸ್ಥಳೀಯ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕೋರಿ ಪ್ರತಿಭಟಿಸಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ಸಮಸ್ಯೆಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ” ಯುವಕರು ತೊಂದರೆ ಅನುಭವಿಸುತ್ತಿದ್ದಾರೆ ತಕ್ಷಣ ಪರಿಹಾರ ಬೇಕು ಮತ್ತು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳು ಹಾಗೂ ಸರ್ಕಾರದಿಂದ ನಾಮನಿರ್ದೇಶಿತನಾಗಿ ಸ್ಥಾನ ಪಡೆದ ಪ್ರಮುಖರು ಕೂಡ ಈ ಸಮಸ್ಯೆಗೆ ಸ್ಪಂದಿಸದಿರುವುದು ಸಾರ್ವಜನಿಕರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. “ಸುಳ್ಯ ತಬ್ಬಲಿ ನಿನಾದೇ ಮಗನೆ?” ಎಂಬ Citizens’ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದ್ದು, ಜನತೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ.
ವಿದ್ಯುತ್ ವ್ಯತ್ಯಯದಿಂದ ವಿದ್ಯಾರ್ಥಿಗಳ ಓದು, ಆಸ್ಪತ್ರೆಗಳ ತುರ್ತು ಸೇವೆ, ವ್ಯಾಪಾರ ವಹಿವಾಟು, ಮನೆಮನೆಯ ದೈನಂದಿನ ಚಟುವಟಿಕೆಗಳಲ್ಲಿ ಅಸಾಧಾರಣ ಅಡಚಣೆ ಉಂಟಾಗಿದ್ದು, ಜನರ ದೈರ್ಯಕ್ಕೆ ಮಿತಿ ಬಂದಿದೆ. ಕೂಡಲೇ ಸೂಕ್ತ ದುರಸ್ತಿ ಕಾರ್ಯ ಹಾಗೂ ಸ್ಪಷ್ಟ ಮಾಹಿತಿ ನೀಡುವಂತೆ ಜನರು ಒತ್ತಾಯಿಸುತ್ತಿದ್ದಾರೆ.
ಸರ್ಕಾರಿ ಯಂತ್ರಾಂಗದ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಮೌನ ಪ್ರಶ್ನೆಯಾಗುತ್ತಿದ್ದು, ಸುಳ್ಯ ಮತ್ತೆ ಬೆಳಕು ಕಾಣಬೇಕಾದ ಅವಶ್ಯಕತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.