ಕಾಸರಗೋಡು: “ಇದಾ…ಚಂಙಿಯಿಮಾರೆ… ಇಂಙಾಮಾರೇ…!” ಎಂಬ ವಿಶಿಷ್ಟ ಶೈಲಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಮೂಲಕ ಪ್ರಸಿದ್ಧಿ ಪಡೆದಿದ್ದ ಕಾಸರಗೋಡು ಮೂಲದ ಯೂಟ್ಯೂಬರ್ ಮತ್ತು ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಮಹಮ್ಮದ್ ಸಾಲಿ ಅಲಿಯಾಸ್ ‘ಶಾಲೂ ಕಿಂಗ್’ ಇದೀಗ ಗಂಭೀರ ಆರೋಪದ ಮೇಲೆ ಬಂಧನವಾಗಿದ್ದಾನೆ
ಅಪ್ರಾಪ್ತ ಬಾಲಕಿಯೊಂದಿಗೆ ಪರಿಚಯ ಬೆಳೆಸಿದ ಶಾಲೂ, ಮದುವೆಯ ಭರವಸೆ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿದ್ದಾರೆ. ಕೇರಳ ಪೊಲೀಸರ ಲುಕ್ ಔಟ್ ನೋಟಿಸ್ ಹಿನ್ನೆಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾಲೂನನ್ನು ಬಂಧಿಸಿದ್ದು. ಅಪ್ರಾಪ್ತ ಬಾಲಕಿಗೆ ಅಮಿಷ ಪ್ರಲೋಭನೆ ಒಡ್ಡಿ ಮದುವೆಯ ಭರವಸೆ ನೀಡಿ ವಂಚಿಸಿದ್ದಾನೆ ಎಂದು ಗಂಭಿರ ಆರೋಪದ ಮೇಲೆ ಬಂಧನವಾಗಿದೆ
ತಮ್ಮ ಪತ್ನಿ ಮತ್ತು ಮೂವರು ಮಕ್ಕಳಿಂದ ಇವರು ಅಂತರ ಕಾಯ್ದುಕೊಂಡಿದ್ದರು ಎಂದು ಮಲಯಾಳಂ ದೃಶ್ಯ ಮಾಧ್ಯಮ ವರದಿಮಾಡಿದೆ. ಶಾಲೂ,ಸಾಮಾಜಿಕ ಖ್ಯಾತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ? ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಹಲವು ಕಂಪನಿಗಳ ಜಾಹಿರಾತು ರಾಯಭಾರಿಯಾಗಿ ಪ್ರಚಲಿತನಾಗಿದ್ದ ಶಾಲೂ, ಸುಳ್ಯದ ಒಂದು ವಸ್ತ್ರ ಮಳಿಗೆಯ ಜಾಹಿರಾತುಗಳಲ್ಲಿಯೂ ಕಾಣಿಸಿಕೊಂಡಿದ್ದರು ಈ ಪ್ರಕರಣ ಸಾಮಾಜಿಕ ಮಾಧ್ಯಮಗಳ ಪ್ರಭಾವ ಮತ್ತು ಸೀನಿ ಖ್ಯಾತಿಯ ದುರುಪಯೋಗದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ ತನಿಖೆ ಮುಂದುವರಿದಿದ್ದು, ನ್ಯಾಯ ಪ್ರಕ್ರಿಯೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.