ಇತ್ತೀಚಿನ ಸುದ್ದಿಗಳು ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಪುರಂದರ ರೈ, ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ತಿಂಗಳಾಡಿ ಆಯ್ಕೆ

ಪುತ್ತೂರು: ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಪುರಂದರ ರೈ ಕೋರಿಕ್ಕಾರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ನೌಶಾದ್ ತಿಂಗಳಾಡಿ ಆಯ್ಕೆಯಾಗಿದ್ದಾರೆ.ಶಾಸಕ ಅಶೋಕ್ ಕುಮಾರ್ ರೈ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ಆಳ್ವ ಅವರ ಶಿಫಾರಸಿನ ಮೇರೆಗೆ ಈ ಆಯ್ಕೆ ನಡೆದಿದೆ.ಪುರಂದರ ರೈ ನೌಶಾದ್ ತಿಂಗಳಾಡಿ ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಾರೆಪುಣಿ ಹಾಗೂ ಇಸ್ಮಾಯಿಲ್ ಖಲಂದರಿಯಾ, ಕೋಶಾಧಿಕಾರಿಯಾಗಿ ಶರೀಫ್ ಗಟ್ಟಮನೆ ಆಯ್ಕೆಯಾಗಿದ್ದಾರೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಹಾರಿಸ್ ಬೋಳೋಡಿ, ಎಸ್.ಸಿ ಘಟಕದ ಅಧ್ಯಕ್ಷರಾಗಿ ಸೋಮಯ್ಯ ತಿಂಗಳಾಡಿ, ಯೂತ್ ಅಧ್ಯಕ್ಷರಾಗಿ ಶಾಫಿ ಬೇರಿಕೆ, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಶರೀಫ್ ತ್ಯಾಗರಾಜೆ, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರಾಗಿ ಶಕೀಲ್ ತ್ಯಾಗರಾಜೆ
ಆಯ್ಕೆಯಾದರು.

Share this article!

Leave A Comment