
ಸರ್ವೆ ಗ್ರಾಮ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ.! – ಕ್ಯಾಂಡಲ್ ಮೊರೆ ಹೋದ ವಿದ್ಯುತ್ ಬಳಕೆದಾರರು- ಇನ್ನೆಷ್ಟು ದಿನ ಕತ್ತಲೆಯಲ್ಲಿರಬೇಕು? ಜನರ ಆಕ್ರೋಶ.
- admin_18np
- June 19, 2025
- Blog
- 0 Comments
- ಪುತ್ತೂರು: ಮೆಸ್ಕಾಂ ಸವಣೂರು ಉಪಕೇಂದ್ರ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ ತಲೆದೋರಿದ್ದು ವಿದ್ಯುತ್ ಬಳಕೆದಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಕೆಲವು ಸಮಯಗಳ ಹಿಂದೆಯೇ ವಿದ್ಯುತ್ ಕಡಿತ ಸಮಸ್ಯೆಯಿದ್ದು ಇದೀಗ ಮಳೆ ಪ್ರಾರಂಭವಾದ ಬಳಿಕ ಜನರು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ.
ಸರ್ವೆ, ಸೊರಕೆ, ಕಲ್ಪಣೆ, ರೆಂಜಲಾಡಿ, ಭಕ್ತಕೋಡಿ ಮತ್ತಿತರ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗಿದ್ದು ರಾತ್ರಿ ವೇಳೆಯಲ್ಲಂತೂ ವಿದ್ಯುತ್ ಇರುವುದೇ ಇಲ್ಲ ,ಎಂದು ಆ ಭಾಗದ ಜನರು ತಿಳಿಸಿದ್ದಾರೆ. ಪದೇ-ಪದೇ ವಿದ್ಯುತ್ ಕಡಿತ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದು ಮೆಸ್ಕಾಂ ವಿರುದ್ಧ ಪ್ರತಿಭಟನೆ ಮಾಡುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಈ ಹಿಂದೆ ಇಂತಹ ಸಮಸ್ಯೆ ಇರಲಿಲ್ಲ, ಇತ್ತೀಚೆಗೆ ವಿಪರೀತ ವಿದ್ಯುತ್ ಸಮಸ್ಯೆ ಉಂಟಾಗಿದ್ದು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ, ವಿದ್ಯುತ್ ಬಿಲ್ ಕಟ್ಟದಿದ್ದರೆ ಕೂಡಲೇ ವಿದ್ಯುತ್ ಕಡಿತಗೊಳಿಸುವ ಮೆಸ್ಕಾಂ ಇಲಾಖೆ ಈಗ ವಿದ್ಯುತ್ ಸರಿಯಾಗಿ ನೀಡದಿದ್ದರೆ ಇದಕ್ಕೇನು ಪರಿಹಾರ ಎಂದು ಆ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮೆಸ್ಕಾಂ ಇಲಾಖೆಯ ಪ್ರಭಾರ ಜೆ .ಇ ಅವರನ್ನು ಕೇಳಿದರೆ ನಮ್ಮಲ್ಲಿ ಸಿಬ್ಬಂದಿ ಲೈನ್‌ಮೆನ್ ಕೊರತೆ ಎನ್ನುವ ಉತ್ತರ ನೀಡುತ್ತಿದ್ದು ಸಿಬ್ಬಂದಿ ಕೊರತೆಯ ನೆಪ ಹೇಳಿ ಜನರಿಗೆ ವಿದ್ಯುತ್ ಸರಿಯಾಗಿ ನೀಡದೇ ಇರುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸಿದ್ದಾರೆ. - ವಿದ್ಯುತ್ ಸಮಸ್ಯೆ ವಿಪರೀತವಾಗಿದ್ದು ಇನ್ವರ್ಟ‌್ರಗೆ ಚಾರ್ಜ್ ಆಗುವಷ್ಟು ಹೊತ್ತು ಕೂಡಾ ವಿದ್ಯುತ್ ಇರುವುದಿಲ್ಲ, ರಾತ್ರಿ ವೇಳೆ ಕ್ಯಾಂಡಲ್ ಹೊತಿಸಿ ಇರಬೇಕಾದ ಪರಿಸ್ಥಿತಿ ಬಂದಿದೆ .
- ಪುತ್ತೂರು: ಮೆಸ್ಕಾಂ ಸವಣೂರು ಉಪಕೇಂದ್ರ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ ತಲೆದೋರಿದ್ದು ವಿದ್ಯುತ್ ಬಳಕೆದಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಕೆಲವು ಸಮಯಗಳ ಹಿಂದೆಯೇ ವಿದ್ಯುತ್ ಕಡಿತ ಸಮಸ್ಯೆಯಿದ್ದು ಇದೀಗ ಮಳೆ ಪ್ರಾರಂಭವಾದ ಬಳಿಕ ಜನರು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಸರ್ವೆ, ಸೊರಕೆ, ಕಲ್ಪಣೆ, ರೆಂಜಲಾಡಿ, ಭಕ್ತಕೋಡಿ ಮತ್ತಿತರ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗಿದ್ದು ರಾತ್ರಿ ವೇಳೆಯಲ್ಲಂತೂ ವಿದ್ಯುತ್ ಇರುವುದೇ ಇಲ್ಲ ಎಂದು ಆ ಭಾಗದ ಜನರು ತಿಳಿಸಿದ್ದಾರೆ. ಪದೇ-ಪದೇ ವಿದ್ಯುತ್ ಕಡಿತ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದು ಮೆಸ್ಕಾಂ ವಿರುದ್ಧ ಪ್ರತಿಭಟನೆ ಮಾಡುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
6
ಈ ಹಿಂದೆ ಇಂತಹ ಸಮಸ್ಯೆ ಇರಲಿಲ್ಲ, ಇತ್ತೀಚೆಗೆ ವಿಪರೀತ ವಿದ್ಯುತ್ ಸಮಸ್ಯೆ ಉಂಟಾಗಿದ್ದು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ, ವಿದ್ಯುತ್ ಬಿಲ್ ಕಟ್ಟದಿದ್ದರೆ ಕೂಡಲೇ ವಿದ್ಯುತ್ ಕಡಿತಗೊಳಿಸುವ ಮೆಸ್ಕಾಂ ಇಲಾಖೆ ಈಗ ವಿದ್ಯುತ್ ಸರಿಯಾಗಿ ನೀಡದಿದ್ದರೆ ಇದಕ್ಕೇನು ಪರಿಹಾರ ಎಂದು ಆ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮೆಸ್ಕಾಂ ಇಲಾಖೆಯ ಜೆ.ಇ ಅವರನ್ನು ಕೇಳಿದರೆ ನಮ್ಮಲ್ಲಿ ಸಿಬ್ಬಂದಿ ಲೈನ್‌ಮೆನ್ ಕೊರತೆ ಎನ್ನುವ ಉತ್ತರ ನೀಡುತ್ತಿದ್ದು ಸಿಬ್ಬಂದಿ ಕೊರತೆಯ ನೆಪ ಹೇಳಿ ಜನರಿಗೆ ವಿದ್ಯುತ್ ಸರಿಯಾಗಿ ನೀಡದೇ ಇರುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸಿದ್ದಾರೆ. ವಿದ್ಯುತ್ ಸಮಸ್ಯೆ ವಿಪರೀತವಾಗಿದ್ದು ಇನ್ವರ್ಟ‌್ರಗೆ ಚಾರ್ಜ್ ಆಗುವಷ್ಟು ಹೊತ್ತು ಕೂಡಾ ವಿದ್ಯುತ್ ಇರುವುದಿಲ್ಲ, ರಾತ್ರಿ ವೇಳೆ ಕ್ಯಾಂಡಲ್ ಹೊತಿಸಿ ಇರಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಂಭಂಧಿಸಿದ ಮೇಲಾಧಿಕಾರಿಗಳು ಈ ಬಗ್ಗೆ ಗಮಣಹರಿಸಿ ತಕ್ಷಣ ಖಾಯಂ ಜೆ ಇ ಯವರನ್ನು ನಿಯೋಜನೆಗೊಳಿಸಿ .