
ಕೂಲಿ ಕಾರ್ಮಿಕರ ಮತ್ತು ಜನ ಸಾಮಾನ್ಯರ ಸಂಕಷ್ಟಗಳನ್ನು ಅರಿತು ಸರಕಾರ ಕೆಂಪು ಕಲ್ಲು,ಜಲ್ಲಿ, ಮರಳಿನ ಸಾಗಾಟದ ಮೇಲೆ ವಿಧಿಸಿರುವ ನಿರ್ಬಂಧವನ್ನು ತಕ್ಷಣ ಹಿಂಪಡೆಯಬೇಕಾಗಿದೆ. ರಫೀಕ್ ಎಂ ಎ ಸದಸ್ಯರು ಗ್ರಾಮ ಪಂಚಾಯತ್ ಸವಣೂರು
- admin_18np
- June 18, 2025
- Blog
- 0 Comments
- ಕೂಲಿ ಕಾರ್ಮಿಕರ ಮತ್ತು ಜನ ಸಾಮಾನ್ಯರ ಸಂಕಷ್ಟಗಳನ್ನು ಅರಿತು ಸರಕಾರ ಕೆಂಪು ಕಲ್ಲು,ಜಲ್ಲಿ, ಮರಳಿನ ಸಾಗಾಟದ ಮೇಲೆ ವಿಧಿಸಿರುವ ನಿರ್ಬಂಧವನ್ನು ತಕ್ಷಣ ಹಿಂಪಡೆಯಬೇಕಾಗಿದೆ.
- ರಫೀಕ್ ಎಂ ಎ
ಸದಸ್ಯರು ಗ್ರಾಮ ಪಂಚಾಯತ್ ಸವಣೂರು - ತೀವ್ರ ಮಳೆ ಹಾನಿ ಮತ್ತು ಪ್ರಾಕೃತಿಕ ವಿಕೋಪಗಳಿಂದ ಉಂಟಾದ ಸಮಸ್ಯೆಗಳಿಂದ ಜನ ಸಾಮಾನ್ಯರು, ಕೃಷಿಕರು, ದಿನಕೂಲಿ ನೌಕರರು
- ಸ್ವಯಂ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿರುವ ಇಂತಹ ಕಠಿಣ ಸಂದರ್ಭದಲ್ಲಿ, ಮರಳು ಕೆಂಪುಗಲ್ಲು ಜಲ್ಲಿಕಲ್ಲು ಸಾಗಾಟಕ್ಕೆ ಜಿಲ್ಲಾಡಳಿತವು ನಿರ್ಬಂಧಗಳನ್ನು ಹೇಳಿರುವುದು ಸರಿಯಲ್ಲ. ಪಂಚಾಯತ್ ಅನುದಾನದಿಂದ ಮಾಡಿ ಮುಗಿಸಬೇಕಾದ ಸಾರ್ವಜನಿಕ ಕಾಮಗಾರಿಗಳು, ಜನ ಸಾಮಾನ್ಯರು ತಮ್ಮ ವಾಸ್ತವ್ಯದ ಉದ್ದೇಶದಿಂದ ನಿರ್ಮಿಸುತಿರುವ ಗೃಹ ನಿರ್ಮಾಣ ಕಾಮಗಾರಿಗಳು ಅಲ್ಲದೆ ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿ ಶಾಲಾ ಆಡಳಿತವು ಮಕ್ಕಳಿಗೆ ಬೇಕಾದ ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ಬೇಕಾಗಿರುವ ಚಿಕ್ಕಪುಟ್ಟ ಕಾಮಗಾರಿಗಳನ್ನು ನೆರವೇರಿಸಲು ಅಡಚಣೆಯಾಗಿರುತ್ತದೆ.ಕೂಡಲೇ ಜನಸಾಮಾನ್ಯರ ಕಷ್ಟವನ್ನು ಅರಿತುಕೊಂಡು ಜಿಲ್ಲಾಡಳಿತವು ಕೆಂಪು ಕಲ್ಲು ,ಜಲ್ಲಿ ,ಮರಳಿನ ಮೇಲೆ ಹೇರಿರುವ ನಿರ್ಬಂಧವನ್ನು ಸಡಿಲಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಪಡಿಸಿದರು .