ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ ಪ್ರಕರಣದ ಆರೋಪಿ ಶ್ರೀಕೃಷ್ಣ ಜೆ.ರಾವ್ ನನ್ನು ಎರಡು ದಿನದೊಳಗೆ ಬಂಧಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಜಿಲ್ಲಾ ಎಸ್ಪಿ ಯವರಿಗೆ ಸೂಚನೆಯನ್ನು ನೀಡಿದ್ದಾರೆ. ಎಸ್ಪಿ ಡಾ.ಅರುಣ್ ಅವರಿಗೆ ಕರೆ ಮಾಡಿದ ಶಾಸಕ ಅಶೋಕ್ ರೈ ಅವರು ಆರೋಪಿ ಎಲ್ಲೇ ಇದ್ದರೂ ಆತನನ್ನು 2 ದಿನಗಳ ಒಳಗೆ ಬಂದಿಸಬೇಕೆಂದು ಸೂಚನೆಯನ್ನು ನೀಡಿದ್ದಾರೆ.