ಖುರ್ರತುಸ್ಸಾದಾತ್ ತಂಞಲ್ ರವರ 1 ನೇ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಜಾತಿ , ಮತ , ಭೇಧವಿಲ್ಲದೆ ಲಕ್ಷಕ್ಕೂ ಮಿಕ್ಕ ಜನರಿಗೆ ಅನ್ನದಾನ.
- admin_18np
- ಜೂನ್ 30, 2025
- Uncategorized
- 0 Comments
ಖುರ್ರತುಸ್ಸಾದಾತ್ ತಂಞಲ್ ರವರ 1 ನೇ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಇಂದು ಅನ್ನದಾನ ಕಾರ್ಯಕ್ರಮವು ನಡೆದಿದ್ದು , ಹಲವು ಕಡೆಗಳಿಂದ ಸಾವಿರಾರು ಜನ , ಲಕ್ಷಕ್ಕಿಂತಲೂ ಮಿಕ್ಕ ಜನರು ಘಂಟೆ ಘಂಟೆ ಕಾದು ನಿಂತು ಜಾತಿ , ಮತ ,ಬೇಧ ನೋಡದೆ ಪ್ರತಿಯೊಬ್ಬನೂ ನನಗೆ ಇವತ್ತಿನ ಪ್ರಸಾದ ಬೇಕೇ ಬೇಕೆಂದು ಕಾದು ಕುಳಿತು ಪಡೆದ ಅದೆಸ್ಟೋ ಜನರನ್ನು ಇವತ್ತು ನೋಡಿದೆ.
ಇದಾಗಿದೆ ಖರಾಮತ್ ಖುರ್ರತುಸ್ಸಾದಾತ್ ತಂಞಲ್ ರವರ
ಹಲವಾರು ವರ್ಷಗಳ ಹಿಂದೆ ಸಿ . ಎಂ ಮಡವೂರ್ ಹೇಳಿದ ಮಾತಾಗಿತ್ತು , ಇಲ್ಲಿನ ಮಣ್ಣು , ನೀರು , ಔಷಧವಾಗಿ ಮಾರ್ಪಡಲಿಕ್ಕಿದೆ.
ಅಲ್ ಹಮ್ದುಲಿಲ್ಲಾ . ಅದು ಪ್ರತಿಯೊಬ್ಬರಿಗೂ ಇವತ್ತಿನ ದಿನವೇ ಗೊತ್ತಾಯಿತು .
ಅದೆಷ್ಟೋ ಜನ ದಟ್ಟಣೆಯ ನಡುವೆ ಯಾವುದೇ ಸಮಸ್ಯೆಗಳಾಗದೆ ನಡೆದ ಕಾರ್ಯಕ್ರಮ , ಅದೋ ಇಂದಿನ ದಿನ ಬಿಟ್ಟ ಮಳೆರಾಯ, ಪ್ರತಿಯೊಬ್ಬನಿಗೂ ಸಿಕ್ಕ ಪ್ರಸಾದ . ಇಂತಹ ಹಲವಾರು ವಿಚಾರ .
ಕೂರತ್ ತಂಞಲ್ ಸಾಮಾನ್ಯ ಪಂಡಿತರಲ್ಲ . ಇಂದಿಗೆ ನಮ್ಮನ್ನಗಳಿ 1 ವರ್ಷ , ತಂಞಲ್ ರವರು ಪಡೆದ ಅದೆಸ್ಟೋ ಜನರ ಪ್ರೀತಿ .ಪಾತ್ರ ಮಾತ್ರ
ಇವತ್ತು ನಡೆದ ಈ ಕಾರ್ಯಕ್ರಮದಲ್ಲಿ ಕೂರತ್ ತಂಞಲ್ ಯಾರು , ಏನೆಂದು ಸಂಪೂರ್ಣವಾಗಿ .ಊರಿನ ಪ್ರತಿಯೊಬ್ಬ ಪ್ರಜೆಗೂ ಅರಿವಾಯಿತು .
ತಂಞಲ್ ರವರು ನಮ್ಮನ್ನಗಳಿರಬಹುದು , ಆದರೆ ನಮ್ಮ ಯಾವುದೇ ಸಮಸ್ಯೆಗಳನ್ನು ಅವರ ಮಖಾಂ ಹತ್ತಿರ ಬಂದು ಪ್ರಾರ್ಥನೆ ಮಾಡಿ ಹೇಳಿಕೊಂಡರೆ . ಅದು ಯಾವುದೇ ಜಾತಿಯವನಾಗಲಿ , ಅವರಿಗೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ.
. ಬೆಳಿಗ್ಗೆ 10 ಗಂಟೆಯಿಂದ ಸಾರ್ವಜನಿಕ ಅನ್ನದಾನ ವಿತರಣೆ ಆರಂಭಗೊಂಡಿದ್ದು ರಾತ್ರಿ ವರೆಗೂ ಅನ್ನದಾನ
ವಿತರಣೆ ನಡೆಯಿತು.
ಬೆಳಗ್ಗಿನಿಂದಲೇ ಕೂರತ್‌ನಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ವಾಹನಗಳ ಪಾರ್ಕಿಂಗ್‌ಗೆ ಬೇರೆ-ಬೇರೆ ಜಾಗಗಳಲ್ಲಿ ಸ್ಥಳಾವಕಾಶ ವ್ಯವಸ್ಥೆ ಮಾಡಿದ್ದರೂ ಕೂಡಾ ನಿಯಂತ್ರಿಸಲಾರದಷ್ಟು ಸಂಖ್ಯೆಯಲ್ಲಿ ವಾಹನಗಳು ಆಗಮಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು. ಮಧ್ಯಾಹ್ನದ ವೇಳೆಯಂತೂ ಸವಣೂರು ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಉರೂಸ್ ಸಮಿತಿಯವರು, ಸ್ವಯಂಸೇವಕರು ಮತ್ತು ಪೊಲೀಸರು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದರೂ ಜನದಟ್ಟಣೆಯಿಂದ ಸುಸೂತ್ರವಾಗಿ ನಿಭಾಯಿಸುವುದು ತ್ರಾಸದಾಯಕವಾಗಿತ್ತು. ಅನ್ನದಾನ ಸ್ವೀಕರಿಸಲು ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಕ್ಯೂನಲ್ಲಿ ನಿಂತು ಅನ್ನದಾನ ಸ್ವೀಕರಿಸುತ್ತಿರುವ ದೃಶ್ಯ ಕಂಡು ಬಂದಿತ್ತು. ನಿರೀಕ್ಷೆಗೂ ಮೀರಿ ಜನಸಾಗರವೇ ಹರಿದು ಬಂದಿದ್ದರಿಂದ ರಾತ್ರಿ ವರೆಗೂ ಅನ್ನದಾನ ವಿತರಣೆ ಮಾಡಬೇಕಾಯಿತು. ಮುಸ್ಲಿಮರು ಮಾತ್ರವಲ್ಲದೇ ಇತರ ಧರ್ಮಗಳ ಬಾಂಧವರು ಕೂಡಾ ಆಗಮಿಸಿ ಅನ್ನದಾನ ಸ್ವೀಕರಿಸುತ್ತಿರುವ ದೃಶ್ಯ ಕಂಡು ಬಂದಿತ್ತು.