ಬಡವರ ಬಳಿ ದುಡ್ಡು ತಗೊಂಡು ಮನೆ ಕೊಟ್ಟಿದ್ರೆ ಹುಳ ಬಿದ್ದು ಸಾಯ್ತಾರೆ : ಸಚಿವ ಜಮೀರ್ ಅಹ್ಮದ್ ಹೇಳಿಕೆ
- admin_18np
- ಜೂನ್ 24, 2025
- Uncategorized
- 0 Comments
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಜಮೀರ್ ಹಣ ಪಡೆದು ಮನೆ ನೀಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿ.ಆರ್ ಪಾಟೀಲ್ ಹೇಳಿಕೆ ಬಗ್ಗೆ ತನಿಖೆ ನಡೆಸಬೇಕು
ಬಡವರ ಬಳಿ ದುಡ್ಡು ತಗೊಂಡು ಮನೆ ಕೊಟ್ಟಿದ್ರೆ ಹುಳ ಬಿದ್ದು ಸಾಯ್ತಾರೆ. ದುಡ್ಡು ತಗೊಂಡವರು ಒಳ್ಳೆದು ಆಗ್ತಾರಾ.. ? ಉದ್ದಾರ
ಆಗುತ್ತಾರಾ..ದೇವರು ಒಳ್ಳೆದು ಮಾಡ್ತಾರಾ ಎಂದು
ಸಚಿವ ಜಮೀರ್ ಹೇಳಿದರು.
ದುಡ್ಡು ಪಡೆದು ಬಡವರಿಗೆ ಮನೆ ಹಂಚಬೇಕಾ..? ಹಾಗೆ ಮಾಡಿದ್ರೆ ನಮ್ಮ ಕುಟುಂಬಕ್ಕೆ
ಒಳ್ಳೆದಾಗುತ್ತಾ…? ಎಂದರು.
ಯಾವುದೇ ಆರೋಪ ಮಾಡಿದ ಹೆಸರು
ಹೇಳಬೇಕಲ್ವಾ..? ಬೇಕಾದರೆ ಇದರ ತನಿಖೆಯನ್ನು
ಸಿಬಿಐಗೂ ಕೊಡಿ..ಬಿ.ಆರ್ ಪಾಟೀಲ್ ಯಾವ
ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು. ಮೂರು ಹಂತದಲ್ಲಿ ನಾವು ಮನೆಗಳನ್ನು ಹಂಚಿಕೆ ಮಾಡುತ್ತೇವೆ. ನಾವು ಯಾವುದೇ ಹೊಸ ಟಾರ್ಗೆಟ್ ನೀಡಿಲ್ಲ ಎಂದರು.





