ಮಂಗಳೂರು ಮಹಾನಗರಪಾಲಿಕೆಗೆ ಲೋಕಾಯುಕ್ತ ಮಿಂಚಿನ ದಾಳಿ: ಇಂಜಿನಿಯರ್, ಕಂದಾಯ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ ಲೋಕಾ ಅಧಿಕಾರಿಗಳು.
- admin_18np
- ಜೂನ್ 22, 2025
- Uncategorized
- 0 Comments
ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಮಹಾನಗರ ಪಾಲಿಕೆಗೆ ಮಿಂಚಿನ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ ಘಟನೆ ವರದಿಯಾಗಿದೆ. ಏಕಕಾಲಕ್ಕೆ ಆರು ತಂಡಗಳು ದಾಳಿ ನಡೆಸಿ ಮಹಾನಗರ ಪಾಲಿಕೆಯ ಕಡತ ಪರಿಶೀಲನೆ ನಡೆಸಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ವಿಪರೀತವಾಗಿ ತಾಂಡವವಾಡುತ್ತಿದ್ದು, ಬ್ರೋಕರ್ಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಇಲ್ಲಿ ಲಂಚ ಕೊಡದೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ್ದಾರೆ.
ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ
ತಿಳಿದು ಬಂದಿದೆ.
ಮಹಾನಗರ ಪಾಲಿಕೆಯಲ್ಲಿ ಕಡತಗಳನ್ನು ವಿಲೇವಾರಿ ಮಾಡದೆ ಲಂಚಕ್ಕಾಗಿ ಸತಾಯಿಸುವುದು, ಮಾತ್ರವಲ್ಲ ಕಚೇರಿಗಳಲ್ಲಿ ಬ್ರೋಕರ್ ಗಳ ಹಾವಳಿ ಮಿತಿಮೀರಿದ್ದು, ಪಾಲಿಕೆಯ ಇಂಜಿನಿಯರ್, ಕಂದಾಯ ವಿಭಾಗಕ್ಕೆ ಲೋಕಾ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ಲೋಕಾಯುಕ್ತ ದ.ಕ ಜಿಲ್ಲಾ ಅಧೀಕ್ಷಕ ಕುಮಾರಚಂದ್ರ ನೇತೃತ್ವದಲ್ಲಿ ಡಿವೈಎಸ್ಪಿಗಳಾದ ಗಾನಾ ಪಿ ಕುಮಾರ್, ಸುರೇಶ್ ಕುಮಾರ್, ಇನ್ಸ್ ಪೆಕ್ಟರ್ ಗಳಾದ ಭಾರತಿ, ಚಂದ್ರಶೇಖರ್,
ಮಂಜುನಾಥ, ರಾಜೇಂದ್ರ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.




