ಖ್ಯಾತ ನ್ಯಾಯವಾದಿ ಕುಂಞಿಪಳ್ಳಿ ನಿಧನ: SDPI ಸಂತಾಪ.
- admin_18np
- ಜೂನ್ 27, 2025
- Uncategorized
- 0 Comments
*ಖ್ಯಾತ ನ್ಯಾಯವಾದಿ ಕುಂಞಿಪಳ್ಳಿ ನಿಧನ: SDPI ಸಂತಾಪ*
ಸುಳ್ಯ: ಸುಳ್ಯದಲ್ಲಿ ಹಲವಾರು ವರ್ಷಗಳಿಂದ ನ್ಯಾಯವಾದಿಯಾಗಿ ,ನೋಟರಿ ವಕೀಲರಾಗಿ ಸೇವೆ ಸಲ್ಲಿಸಿದ್ದ Adv ಕುಂಞಿಪಳ್ಳಿಯವರು ನಿಧನರಾಗಿದ್ದಾರೆ.ಇವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ ಮೀರಝ್ ಸುಳ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಖ್ಯಾತ ನ್ಯಾಯವಾದಿಯಾಗಿ ಹಾಗೂ ನೋಟರಿ ಐ ಯಾಗಿ,ಐವತ್ತೊಕ್ಲು ದರ್ಗಾ ಶರೀಫ್ ನ ಅಧ್ಯಕ್ಷರಾಗಿ ಹಾಲಿ ಗೌರವಾಧ್ಯಕ್ಷರಾಗಿ,ಸುಳ್ಯ ತಾಲ್ಲೂಕು ಬೋರ್ಡ್ ನ ಮಾಜಿ ಅಧ್ಯಕ್ಷ, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕೊಡುಗೈ ದಾನಿ ಹಾಗೂ ಪರೋಪಕಾರಿಯಾಗಿದ್ದ ಕುಂಞಪಳ್ಳಿಯವರ ಅಗಲುವಿಕೆಯು ಸಮುದಾಯಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಸೃಷ್ಟಿಕರ್ತನು ಇವರ ಪರಲೋಕ ಯಾತ್ರೆಯನ್ನು ಸುಗಮಗೊಳಿಸಲಿ. ಕುಟುಂಬಕ್ಕೆ ಮತ್ತು ಬಂದು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಮೀರಝ್ ರವರು ತಮ್ಮ ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಶ್ರಫ್ ಟರ್ಲಿ
ಮಾಧ್ಯಮ ಉಸ್ತುವಾರಿಗಳು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ





