ನಾಳೆಯಿಂದ ‘ಕೂರತ್ ತಂಬಳ್’ರ ಪ್ರಥಮ ಉರೂಸ್.
- admin_18np
- ಜೂನ್ 25, 2025
- Uncategorized
- 0 Comments
ನಾಳೆಯಿಂದ ‘ಕೂರತ್ ತಂಬಳ್’ರ ಪ್ರಥಮ ಉರೂಸ್
ಮಂಗಳೂರು, ಜೂ.24: ಕೂರತ್ ತಂಬಳ್ ಎಂದೇ ಪ್ರಸಿದ್ಧರಾಗಿದ್ದ ಖುರತುಸ್ಸಾದಾತ್ ಸೈಯದ್ ಫಝಲ್ ಕೋಯಮ್ಮ ತಂಬಳ್ ಅಲ್ ಬುಖಾರಿಯವರ ಪ್ರಥಮ
ವರ್ಷದ ಉರೂಸ್ ಜೂ.26ರಿಂದ 29ರವರೆಗೆ ಕಡಬ ತಾಲೂಕಿನ ಕೂರತ್ನ ಫಝಲ್ ನಗರದಲ್ಲಿ ನಡೆಯಲಿದೆ. ಸಂಜೆ 4.30ಕ್ಕೆ ಉರೂಸ್ ಸಮಿತಿಯ ಅಧ್ಯಕ್ಷ ಅಸೈಯದ್ ಕೆ.ಎಸ್.ಆಟಕೋಯ ತಂಬಳ್ ಕುಂಬೋಳ್ ನೇತೃತ್ವದಲ್ಲಿ ಝಿಯಾರತ್ನೊಂದಿಗೆ ಉರೂಸ್ ಸಮಾರಂಭ ಚಾಲನೆ ಗೊಳ್ಳಲಿದೆ ಎಂದು ಉರೂಸ್ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ತೌಸೀಫ್ ಸಅದಿ ಹರೇಕಳ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 5:30ಕ್ಕೆ ಕರ್ನಾಟಕ ಸುನ್ನಿ ಉಲಮಾ ಒಕೂಟದ ರಾಜ್ಯಾಧ್ಯಕ್ಷ ಖಾಝಿ ಮೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟನೆ ನೆರವೇರಿಸುವರು. ಅಸೈಯದ್ ಅಬ್ದುರಹ್ಮಾನ್ ಸಾದಾತ್ ತಂಬಳ್ ಬಾಅಲವಿ ಉಲ್ಲೂರು ಅಧ್ಯಕ್ಷತೆ ವಹಿಸುವರು. ಬಳಿಕ ವಿವಿಧ ಕಾರ್ಯಕ್ರಮ
ನಡೆಯಲಿದ್ದು, ರಾತ್ರಿ 8ಕ್ಕೆ ಇಂಡಿಯನ್ ಗ್ರಾಂಡ್ ಮುಸ್ಲಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾನ್ಸರೆನ್ನ್ಸ್ ಉದ್ಘಾಟಿಸುವರು ಎಂದರು.
~
ಜೂ.28ರಂದು ಬೆಳಗ್ಗೆಯಿಂದ ವಿವಿಧ ಕಾರ್ಯಕ್ರಮ ನಡೆಯಲಿದ್ದು ಸಂಜೆ 7ಕ್ಕೆರಸುಲ್ ಉಲಮಾ ಇ.ಸುಲೈಮಾನ್ ಉಸ್ತಾದ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸುವರು. ಜೂ.29ರಂದು ಬೆಳಗ್ಗೆ 8:30ಕ್ಕೆ ಖತ್ಕುಲ್ ಖುರ್ ಆನ್
ಸಮರ್ಪಣೆ ಹಾಗೂ ಬದರ್ ಮೌಲಿದ್ ನಡೆಯಲಿದೆ. 10ರಿಂದ ಸಂಜೆ 6ರವರೆಗೆ ಅನ್ನದಾನದೊಂದಿಗೆ ಉರೂಸ್ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿಯ ಉಪಾಧ್ಯಕ್ಷ ಅಬೂಬಕರ್ ಹಾಜಿ ರೈಸ್ಕೋ, ಸಮಿತಿಯ ಸಂಚಾಲಕ ಖಾಲಿದ್ ಹಾಜಿ ಭಟ್ಕಳ, ಎಸ್ ವೈಎಸ್ ಕರ್ನಾಟಕ ರಾಜ್ಯ ಕೋಶಾಧಿಕಾರಿ ಮನ್ಸೂರ್ ಅಲಿ ಕೋಟೆಗದ್ದೆ ಉರೂಸ್ ಸಮಿತಿಯ ಸಂಚಾಲಕ ನವಾಝ್ ಸಖಾಫಿ ಅಡ್ಯಾರ್ಪದವು, ಬಿ.ಎಸ್.ಇಸ್ಮಾಯಿಲ್ ಉಪಸ್ಥಿತರಿದ್ದರು.






